
ಹಿರಿಯೂರು:
ನಗರದ ಸಿದ್ಧನಾಯಕ ವೃತ್ತಸಮೀಪದ ನಿವಾಸಿಯಾದ ಕೂನಿಕೆರೆ ಕೆ.ಕೆ.ರಫಿ(58) ರವರು ಶುಕ್ರವಾರ ನಿಧನರಾಗಿದ್ದಾರೆ, ಮೃತರಿಗೆ ತಾಯಿ, ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರು ಇದ್ದಾರೆ.
ನಗರ ಆಜಾದ್ ನಗರ ಬಡಾವಣೆಯ ಸೈದಾನ ಉಮರ್ ಮಸೀದಿ ಆಡಳಿತ ಮಂಡಳಿಯ ಹಾಲಿ ಕಾರ್ಯದರ್ಶಿಯಾಗಿದ್ದ ರಫಿ ಕೂನಿಕೆರೆ ಅವರು ಜಾಮೀಯ ಮಸೀದಿಯ ಮಾಜಿ ಕಾರ್ಯದರ್ಶಿಯಾಗಿ ಸಹ ಸೇವೆ ಸಲ್ಲಿಸಿದ್ದರು.
ಶನಿವಾರದಂದು ಮಧ್ಯಾಹ್ನ 2ಗಂಟೆಗೆ ನಗರದ ತಾಲ್ಲೂಕು ಕಚೇರಿ ಪಕ್ಕದಲ್ಲಿರುವ ಖಬರ್ ಸ್ಥಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂಬುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಶ್ರೀಯುತ ಕೆ.ಕೆ.ರಫಿ ಕೂನಿಕೆರೆರವರು ನಮಗೆ ಅತ್ಯಂತ ಆತ್ಮೀಯರಾಗಿದ್ದು, ಅತ್ಯಂತ ಸರಳ ಸಜ್ಜನಿಕೆಯ, ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದರು, ಅವರ ನಿಧನ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ಅವರ ಕುಟುಂಬಸ್ಥರಿಗೆ ಕರುಣಿಸಲಿ ಎಂಬುದಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ಹಾಗೂ “ಹಿರಿಯೂರು ನ್ಯೂಸ್” ತಂಡದ ಮುಖ್ಯಸ್ಥರಾದ ಆಲೂರುಹನುಮಂತರಾಯಪ್ಪ ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ, ಉಮೇಶ್ ಯಾದವ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ ಇವರುಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
