
ಹಿರಿಯೂರು:
ಸರ್ಕಾರ ವಿದ್ಯಾರ್ಥಿನಿಯರಿಗೆ ಅನೇಕ ಸೌಲಭ್ಯಗಳನ್ನು ನೀಡಿದೆ ಅವುಗಳನ್ನು ಪ್ರಾಮಾಣಿಕವಾಗಿ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಇದರಲ್ಲಿ ಲೋಪದೋಷ ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ನಗರದ ಹೊರವಲಯದಲ್ಲಿರುವ ಹರಿಶ್ಚಂದ್ರಘಾಟ್ ನ ಅಲ್ಪಸಂಖ್ಯಾತರ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿ ನಿಲಯದ ಸೌಲಭ್ಯಗಳನ್ನು ಪರಿಶೀಲಿಸಿ ವಿದ್ಯಾರ್ಥಿನಿಯರ ಕುಂದುಕೊರತೆಗಳನ್ನು ಆಲಿಸಿ ನಂತರ ಅವರು ಮಾತನಾದರು.

ಸರಿಯಾದ ಸಮಯಕ್ಕೆ ಊಟ ನೀಡುತ್ತಿಲ್ಲ. ಸ್ವಚ್ಚತೆ ಇಲ್ಲ. ಆರೋಗ್ಯ ತಪಾಸಣೆ ಮಾಡಿಸುವುದಿಲ್ಲ ಎಂಬಿತ್ಯಾದಿ ದೂರುಗಳು ಕೇಳಿಬಂದಿವೆ. ಗುಣಮಟ್ಟದ ಆಹಾರ ನೀಡದಿದ್ದರೆ ನೀವು ಕೆಲಸಕ್ಕೆ ಏಕೆ ಬರುತ್ತೀರ ಎಂಬುದಾಗಿ ಅವರು ಹಾಸ್ಟೆಲ್ ಅಧಿಕಾರಿಗಳನ್ನು ಖಾರವಾಗಿ ಅವರು ಪ್ರಶ್ನಿಸಿದರು.

ಪ್ರತಿ 15 ದಿನಕೊಮ್ಮೆ ವೈದ್ಯರನ್ನು ಕರೆಸಿ ಆರೋಗ್ಯ ತಪಾಸಣೆ ಮಾಡಿಸಿ, ಮೆನು ಪ್ರಕಾರ ಅಡುಗೆ ಮಾಡಿಸಬೇಕು. ಅದನ್ನು ನೋಟೀಸ್ ಬೋರ್ಡ್ ಗೆ ಹಾಕಬೇಕು. ಮತ್ತೊಮ್ಮೆ ವಿದ್ಯಾರ್ಥಿನಿಯರಿಂದ ದೂರು ಬಂದಲ್ಲಿ ಕೆಲಸದಿಂದ ತೆಗೆದು ಹಾಕುವುದಾಗಿ ಅವರು ಎಚ್ಚರಿಕೆ ನೀಡಿದರು. ಅಲ್ಲದೆ, ಹಾಸ್ಟೆಲ್ ನಲ್ಲೇ ಊಟ ಮಾಡಿ ಆಹಾರದ ಗುಣಮಟ್ಟ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷರಾದ ಚಿಗಳಕಟ್ಟೆಕಾಂತರಾಜ್, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷರಾದ ಖಾದಿರಮೇಶ್, ಕೆ.ಡಿ.ಪಿ.ಸದಸ್ಯರಾದ ಗುರುಪ್ರಸಾದ್, ನಗರಸಭೆ ಮಾಜಿ ಅಧ್ಯಕ್ಷರಾದ ಟಿ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡರುಗಳಾದ ಶಿವಣ್ಣ, ಶಿವಕುಮಾರ್, ಜ್ಞಾನೇಶ್, ಜಿ.ದಾದಾಪೀರ್, ರಘು, ಪಿ.ಎಸ್.ಸಾದತ್ ವುಲ್ಲಾ, ಈರಲಿಂಗೇಗೌಡ, ಜಿ.ಎಲ್.ಮೂರ್ತಿ, ಕಲ್ಲಹಟ್ಟಿ ಹರೀಶ್, ನಾಗೇಂದ್ರನಾಯ್ಕ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
