March 2, 2026
0002 - Copy (2)

ಹಿರಿಯೂರು:

ಮಕ್ಕಳಿಗೆ ಹಳ್ಳಿ ಸೊಗಡಿನ ಬಗ್ಗೆ, ಮಕ್ಕಳು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದರ ಬಗ್ಗೆ ಹಿಂದಿನ ಕಾಲದಲ್ಲಿ ಹಳ್ಳಿ ಜೀವನ ಹೇಗಿತ್ತು ಎನ್ನುವುದರ ಬಗ್ಗೆ ಈಗಿನ ಮಕ್ಕಳಿಗೆ ಶಿಕ್ಷಕರು ಮತ್ತು ಪೋಷಕರು ತಿಳಿಸಿಕೊಡಬೇಕು  ಹಾಗೂ ವಿದ್ಯಾಭ್ಯಾಸದ ಜೊತೆಗೆ ಕೃಷಿ ಮತ್ತು  ಹಳ್ಳಿ ಜೀವನದ ಬಗ್ಗೆ ತಿಳಿಸಿಕೊಡಬೇಕು ಎಂಬುದಾಗಿ ಶ್ರೀ ವಾಸವಿಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಕೆ.ವಿ.ಅಮರೇಶ್ ಅವರು ಹೇಳಿದರು.

ನಗರದ ಶ್ರೀ ವಾಸವಿ ಪಬ್ಲಿಕ್ ಶಾಲೆಯಲ್ಲಿ  ಹಮ್ಮಿಕೊಳ್ಳಲಾಗಿದ್ದ  ಸಂಕ್ರಾತಿ ಹಬ್ಬವನ್ನು  ವಿಜೃಂಭಣೆಯಿಂದ ಆಚರಣಾ ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ವಹಿಸಿ ಅವರು ಮಾತನಾಡಿದರು.

ಶಾಲೆಯ ಶಿಕ್ಷಕರು  ಹಳ್ಳಿಯ ಚಿತ್ರಣವನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದರು. ಮಕ್ಕಳಿಗೆ ಹಳ್ಳಿಯ ಸೊಬಗನ್ನು ಹೇಳಿದರು.  ಈ ಕಾರ್ಯಕ್ರಮದಲ್ಲಿ ಪೋಷಕರು , ಮಕ್ಕಳು ಸಾಂಪ್ರಾದಯಿಕ ಉಡುಗೆಯಲ್ಲಿ ತುಂಬಾ ಉತ್ಸಾಹದಿಂದ  ಪಾಲ್ಗೊಂಡಿದ್ದರು.

ಪೋಷಕರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪೋಷಕರು ತಮ್ಮ ಹಿಂದಿನ ಬಾಲ್ಯವನ್ನು ನೆನೆಸಿಕೊಂಡು ಅವರು ಸಂತೋಷವನ್ನು ವ್ಯಕ್ತಪಡಿಸಿದರು.  ಮುಂದಿನ ದಿನಗಳಲ್ಲಿ  ಇಂತಹ ಕಾರ್ಯಕ್ರಮಗಳನ್ನು  ನಡೆಸಬೇಕು ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ  ವಾಸವಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಕೆ.ಜಿ.ಶ್ರೀಧರ್, ಶಿಕ್ಷಣ ಕಾರ್ಯದರ್ಶಿ ಆರ್.ಪ್ರಕಾಶ್ ಕುಮಾರ್, ವಾಸವಿ ಯುವಜನ ಸಂಘದಅಧ್ಯಕ್ಷರಾದ ವಿ.ಜಗದೀಶ್, ಕೋ-ಆರ್ಡಿನೇಟರ್ ಎಂ.ಜಿ.ರಮ್ಯಾ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *