
ಹಿರಿಯೂರು :
ತಾಲ್ಲೂಕಿನ ಶ್ರೀ ಶುಭೋದಯ ಶೈಕ್ಷಣಿಕ ಸೇವಾ ವೃದ್ದಾಶ್ರಮ ಟ್ರಸ್ಟ್ ಸಂಸ್ಥಾಪಕರಾದ ಶಿವಶರಣೆ ಶ್ರೀಮತಿ ಗಿರಿಯಮ್ಮ ಮಾತೆಯವರ 6 ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು ಎಂಬುದಾಗಿ ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಶಿವಶರಣೆ ಶ್ರೀಮತಿ ಗಿರಿಯಮ್ಮ ಮಾತೆಯವರ 6 ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಕುಟುಂಬದವರು, ಬಂಧು-ಮಿತ್ರರು, ಸುತ್ತಮುತ್ತಲಿನ ಗ್ರಾಮಗಳ ಶರಣರು, ಭಕ್ತವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಿದ್ದಾರೆ ಎಂಬುದಾಗಿ ಹೇಳಿದರು.

