March 5, 2026
00001

ಹಿರಿಯೂರು:

ನಗರದ 12ನೇ ವಾರ್ಡ್ ಕೊಲ್ಲಾಪುರದಮ್ಮ ದೇವಾಲಯದ  ರಸ್ತೆಯಲ್ಲಿ ನೆಲೆಸಿರುವ ಶ್ರೀ ಕೊಲ್ಲಾಪುರದಮ್ಮ ದೇವಿಯ ಕಡೇ ಕಾರ್ತಿಕ ಪೂಜಾ ಮಹೋತ್ಸವ  ಕಾರ್ಯಕ್ರಮ ಹಲವಾರು ಭಕ್ತರ ಸಮ್ಮುಖದಲ್ಲಿ ಭಕ್ತಿ-ಭಾವದಿಂದ  ನೆರವೇರಿಸಲಾಯಿತು.

ಇದರ ಅಂಗವಾಗಿ ಶ್ರೀ ಕೊಲ್ಲಾಪುರದಮ್ಮ ದೇವರಿಗೆ  ವಿಶೇಷ ಪೂಜೆ,  ಅಲಂಕಾರ,  ಅರ್ಚನೆ,ಅಭಿಷೇಕ ಹಾಗೂ ಸುಮಂಗಲೆಯರಿಂದ ತಂಬಿಟ್ಟಿನ ಆರತಿ ಕಾರ್ಯಕ್ರಮ ಜರುಗಿತು.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಕೊಲ್ಲಾಪುರದಮ್ಮ ದೇವರ ಕಾರ್ತಿಕ ಪೂಜಾ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು. ಸುಮಂಗಲೆಯರಿಂದ ತಂಬಿಟ್ಟಿನ ಆರತಿ ಕಾರ್ಯಕ್ರಮ ಮಹಾಮಂಗಳಾರತಿ ನಂತರ ತೀರ್ಥ  ಪ್ರಸಾದ ವಿನಿಯೋಗ  ಹಾಗೂ ಉಪಹಾರ ವಿತರಣೆ ಏರ್ಪಡಿಸಲಾಗಿತ್ತು.

About The Author

Leave a Reply

Your email address will not be published. Required fields are marked *