March 3, 2026
000001

ಹಿರಿಯೂರು :

ರೋಟರಿ ಮತ್ತು ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಗರದ ಸಾಮಾನ್ಯ ಜನರ ಆರೋಗ್ಯ ರಕ್ಷಣೆಗಾಗಿ ಉಚಿತ ಹೃದಯರೋಗ, ಕಿಡ್ನಿ, ಮೂತ್ರಪಿಂಡದಕಲ್ಲು, ಕ್ಯಾನ್ಸರ್ ಖಾಯಿಲೆಗಳ ರೋಗ ತಪಾಸಣೆ ಮತ್ತು ಚಿಕಿತ್ಸೆಗಳನ್ನು ಬೆಂಗಳೂರಿನ ಉತ್ತಮ ಆಸ್ಪತ್ರೆ ಮತ್ತು ತಜ್ಞ ವೈದ್ಯರಿಂದ ನಡೆಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂಬುದಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ರಾದ ಹೆಚ್.ಎಸ್. ಸುಂದರ್ ರಾಜ್ ಹೇಳಿದರು.

ನಗರದ ರೋಟರಿ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಸಂಸ್ಥೆ, ಸರ್ವೋದಯ, ಬ್ರಹ್ಮ ಸಮಾಜ ಹಿರಿಯೂರು,  ಬೆಂಗಳೂರು ಸಪ್ತಗಿರಿ ಆಸ್ಪತ್ರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ನುರಿತ ತಜ್ಞ ವೈದ್ಯರಿಂದ ಈ ದಿನ ಸಾರ್ವಜನಿಕರಿಗೆ ಹೃದಯರೋಗ, ಕಿಡ್ನಿ, ಮೂತ್ರಪಿಂಡದಕಲ್ಲು, ಕ್ಯಾನ್ಸರ್ ಖಾಯಿಲೆಗಳ ರೋಗಗಳ ತಪಾಸಣೆ ನಡೆಸಲಾಗುತ್ತಿದೆ, ನಿಮ್ಮ ಸಮಸ್ಯೆಗಳನ್ನು ವೈದ್ಯರ ಬಳಿ ಹೇಳಿಕೊಳ್ಳುವ ಮೂಲಕ ಸೂಕ್ತ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂಬುದಾಗಿ ಅವರು ಮನವಿ ಮಾಡಿದರು.

ರೋಟರಿ ಅಧ್ಯಕ್ಷರಾದ ಕೆ.ಎ.ವರುಣ್ ಮಾತನಾಡಿ, ರೋಟರಿ, ರೆಡ್ ಕ್ರಾಸ್ ಸಂಸ್ಥೆಗಳು ಸದಾ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ, ದಾನಿಗಳ ಸಹಕಾರದಲ್ಲಿ ಹೆಚ್ಚು ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಂದಿದ್ದು, ಈ ಶಿಬಿರದ ದಾನಿಗಳಾಗಿ ರೆಡ್ ಕ್ರಾಸ್ ಚೇರ್ಮನ್ ರಾದ ಹೆಚ್.ಎಸ್. ಸುಂದರ್ ರಾಜ್ ಮತ್ತು ಶ್ರೀಮತಿ ಮಂಗಳಗೌರಮ್ಮ ದಂಪತಿಗಳು ತಮ್ಮ ವಿವಾಹವಾರ್ಷಿಕೋತ್ಸವದ ಸವಿ ನೆನಪಿಗಾಗಿ ಈ ದಿನದ ಶಿಬಿರವನ್ನು ಹಮ್ಮಿಕೊಂಡಿದ್ದಾರೆ ಎಂದರಲ್ಲದೆ,

ಈ ಶಿಬಿರದಲ್ಲಿ ಸುಮಾರು 150 ಜನರು ಆರೋಗ್ಯ ತಪಾಸಣೆ ನಡೆಸಿಕೊಂಡಿರುವುದು ಸಂತಸ ವಿಚಾರವಾಗಿದ್ದು, ಸುಮಾರು 8 ಜನರಿಗೆ ಶ್ರವಣ ಸಾಧನವನ್ನು ಸುಂದರ್ ರಾಜ್ ರವರು ತಮ್ಮ ವಿವಾಹವಾರ್ಷಿಕೋತ್ಸವದ ಅಂಗವಾಗಿ  ಉಚಿತವಾಗಿ ನೀಡಿದ್ದಾರೆ. ಈ ದಂಪತಿಗಳಿಗೆ ಇನ್ನೂ ಹೆಚ್ಚಿನ ಆಯಸ್ಸು, ಆರೋಗ್ಯವನ್ನು ಭಗವಂತನು ಕರುಣಿಸಲಿ ಎಂದು ನಿಮ್ಮೆಲ್ಲರ  ಪರವಾಗಿ ಪ್ರಾರ್ಥಿಸುತ್ತೇನೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ಶ್ರೀಮತಿ ಶಶಿಕಲಾರವಿಶಂಕರ್ ಎ.ರಾಘವೇಂದ್ರ, ಎಸ್.ಜೋಗಪ್ಪ, ಹೆಚ್.ವೆಂಕಟೇಶ್, ಪಿ.ಆರ್.ಸತೀಶ್ ಬಾಬು, ವಸಂತ್ ಕುಮಾರ್, ಓಂಕಾರ್, ರಾಜೇಶ್, ಸಣ್ಣಭೀಮಣ್ಣ,  ಕೆ.ಹೆಚ್. ಮಹಬಲೇಶ್ವರ ಶೆಟ್ಟಿ, ರಂಗನಾಥಪ್ಪ, ಪರಮೇಶ್ವರಭಟ್ಟ, ಗೀತಾರಾಧಾಕೃಷ್ಣ ಮತ್ತು ಸಂಗಡಿಗರು, ರೋಟರಿ ಕಾರ್ಯದರ್ಶಿ ವಿಕಾಸ್ ಜೈನ್, ಸಪ್ತಗಿರಿ ಆಸ್ಪತ್ರೆಯ  ತಜ್ಞವೈದ್ಯರ ತಂಡ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ನೀಡಲಾಗುವುದು  ಎಂಬುದಾಗಿ ಆಸ್ಪತ್ರೆಯ ಕೋ-ಆರ್ಡಿನೇಟರ್ ತಿಳಿಸಿರುತ್ತಾರೆ.

About The Author

Leave a Reply

Your email address will not be published. Required fields are marked *