October 29, 2026
00002

ಹಿರಿಯೂರು :

ಅಪ್ಪು ಬರೀ ನಟನೆಯಷ್ಟೇ ಅಲ್ಲ ಸಾಮಾಜಿಕ ಜೀವನದಲ್ಲೂ ಕೂಡ ಒಂದು ಅಪರೂಪದ ಮೇರು ವ್ಯಕ್ತಿತ್ವ, ಬೆಳ್ಳಿತೆರೆಯ ಮೇಲಷ್ಟೇ ನಾಯಕನಾಗಿ ಮೆರೆಯದೆ ಸಾರ್ವಜನಿಕ ಜೀವನದಲ್ಲಿ ಕೂಡ ಸಾವಿರಾರು ಅನಾಥಾಶ್ರಮ, ನೂರಾರು ಶಾಲೆ, ಅಲ್ಪಸಂಖ್ಯಾತ ಬಡವರ ಪಾಲಿಗೆ ಸಹಾಯಹಸ್ತ ನೀಡಿರುವುದರಿಂದ ಅವರ ಹೆಸರು ಅಜರಾಮರವಾಗಲು ಸಾಧ್ಯವಾಗಿದೆ ಎಂಬುದಾಗಿ ಡಾ.ರಾಜಕುಮಾರ್ ಸಂಘದ ಅಧ್ಯಕ್ಷ ಕೇಶವಮೂರ್ತಿ ಹೇಳಿದರು.

ಹಿರಿಯೂರಿನ ಎನ್.ಡಿ.ಎ ಸಂಭಾವ್ಯ ಅಭ್ಯರ್ಥಿ ರಾಜಣ್ಣನವರ ಗೃಹ ಕಚೇರಿಯಲ್ಲಿ ನಡೆದ “ಅಪ್ಪು ಅಜರಾಮರ ಪುಣ್ಯಸ್ಮರಣೆ” ಕಾರ್ಯಕ್ರಮದಲ್ಲಿ ಭಾಗವಹಿಸಿ,ನಂತರ ಅವರು ಮಾತನಾಡಿದರು.

ಒಬ್ಬ ಒಳ್ಳೆಯ ನಟ, ಕ್ರೀಡಾಪಟು, ರಾಜಕಾರಣಿಗಳು ಹೆಸರು ಗಳಿಸಬಹುದು ಆದರೆ ಅಂತಹವರು ಡಾ.ಪುನೀತ್ ರಾಜಕುಮಾರ್ ರೀತಿಯಲ್ಲಿ ಬದುಕು ನಡೆಸಬೇಕು, ಪುನೀತ್ ರಾಜ್ ಕುಮಾರ್ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯಲು ಕಾರಣ ಅವರ ಸಮಾಜಮುಖಿ ಕಾರ್ಯಗಳು ಎಂಬುದಾಗಿ ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ದ್ಯಾಮಣ್ಣ ಮಾತನಾಡಿ, ನಾಳೆ ನಾನು ಎಲ್ಲೋ ಹೇಗೋ ಏನೋ ಎನ್ನುವ ಕ್ಷಣಿಕ ಜೀವನ ಸಾಗಿಸುತ್ತಿರುವ ನಾವು ಬದುಕಿನುದ್ದಕ್ಕೂ ಪುನೀತ್ ರಾಜಕುಮಾರ್ ರೀತಿಯಲ್ಲಿ ಬದುಕಿದರೆ ಮಾತ್ರ ಸಾರ್ಥಕ ಜೀವನವಾಗುವುದು, ನಿಜಕ್ಕೂ ಅಪ್ಪು ಅವರ ಬದುಕು ಜೀವನ ಶೈಲಿ, ಪರೋಪಕಾರಗುಣ ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಡಾ.ರಾಜ್ ಸಂಘದ ಉಪಾಧ್ಯಕ್ಷ ರಂಗಸ್ವಾಮಿ, ರುದ್ರೇಶ್, ಯಶೋಧರ, ಕಾಂತ ಓಬಳಾಪುರ, ಚಂದನ್, ವೈ.ಸುರೇಶ್, ವೀರೇಶ್,  ಧನು, ಮನು, ಪವನ್, ಕಾರ್ತಿಕ್, ಸರ್ದಾರ್ ಮಂಜು ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *