March 2, 2026
001

ಹಿರಿಯೂರು:

ಮಕ್ಕಳಿಗೆ ಶಿಕ್ಷಣದ ಜೊತೆಜೊತೆಯಲ್ಲಿ ಹರ್ಷದಾಯಕವಾದ ಸಹಪಠ್ಯ ಚಟುವಟಿಕೆಗಳನ್ನು ನೀಡುವುದು ಅತ್ಯಗತ್ಯವಾಗಿದ್ದು, ಈ ಚಟುವಟಿಕೆಗಳು ಮಕ್ಕಳಿಗೆ ಹೆಚ್ಚಿನ ಉತ್ಸಾಹ, ಉತ್ತೇಜನ ಹಾಗೂ ಚೈತನ್ಯವನ್ನು ನೀಡುವ ಜೊತೆಗೆ ಮನೋರಂಜನೆಯನ್ನು ನೀಡುತ್ತದೆ ಎಂಬುದಾಗಿ ಶ್ರೀ ವಾಗ್ದೇವಿ ವಿದ್ಯಾಸಂಸ್ಥೆ  ಮುಖ್ಯಶಿಕ್ಷಕರಾದ ಹಳವುದರ ಶರಣಪ್ಪ ಅವರು ಹೇಳಿದರು.

ನಗರದ ಶ್ರೀ ವಾಗ್ದೇವಿ ವಿದ್ಯಾಸಂಸ್ಥೆ ಆವರಣದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆಯನ್ನು ನೀಡಿ, ನಂತರ  ಅವರು ಮಾತನಾಡಿದರು.

ಶಿಕ್ಷಣದಷ್ಟೇ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದು, ದಿನದ ಒಂದು ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಹರ್ಷದಾಯಕವಾದಂತಹ ಕ್ರೀಡೆ. ಸಾಹಿತ್ಯ ಸಂಗೀತ ನೃತ್ಯ. ಚಿತ್ರಕಲೆ, ಹಾಡುಗಾರಿಕೆ ಕುರಿತು ವಿಶೇಷ ತರಬೇತಿಗಳಿಂದ ವ್ಯಕ್ತಿತ್ವ ವಿಕಸನ ಮತ್ತು ಮಾನಸಿಕ ಅಭಿವೃದ್ಧಿಗೆ  ಸಹಾಯಕವಾಗಿವೆ ಎಂಬದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಗೋಣಿಚೀಲ ಓಟದ ಸ್ಪರ್ಧೆ ಪಾಸಿಂಗ್ ದಿ ಬಾಲ್ ಮ್ಯೂಸಿಕಲ್, ಸಂಗೀತ ಸ್ಪರ್ಧೆ  ಗಳು ನಡೆದವು.

ಈ ಕಾರ್ಯಕ್ರಮದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಶಂಕರ್ ಮಠದ್, ಸಹಶಿಕ್ಷಕರಾದ ಚಂದ್ರಶೇಖರ್,ಉಮಾಶಂಕರ್, ಧರ್ಮಶೀಲ, ರುಕ್ಮಿಣಿ,  ಕಾವ್ಯ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *