June 13, 2026

ಜಿಲ್ಲಾ ಕಾರ್ಯನಿರತ   ಪತ್ರಕರ್ತರ ಸಂಘದ  ಅಧ್ಯಕ್ಷರಾಗಿ

ಬಿ.ಎಸ್.ವಿನಾಯಕ್ ಅವಿರೋಧವಾಗಿ  ಆಯ್ಕೆಯಾಗಿದ್ದಾರೆ

ಚಿತ್ರದುರ್ಗ:

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ, ಜಿಲ್ಲಾ ಘಟಕದ  ಆಡಳಿತ ಮಂಡಳಿಯ ವಿವಿಧ ಸ್ಥಾನಗಳಿಗೆ ಭಾನುವಾರ ಚುನಾವಣೆ ಶಾಂತಿಯುತವಾಗಿ  ನಡೆಯಿತು.ರಾತ್ರಿ ಫಲಿತಾಂಶ ಪ್ರಕಟಗೊಂಡಿದ್ದು ಹೊಸ ಮಂಡಳಿ ಅಸ್ಥಿತ್ವಕ್ಕೆ ಬಂದಿದ್ದು,  ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬಿ.ಎಸ್. ವಿನಾಯಕ್ ಅವರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಉಪಾಧ್ಯಕ್ಷರಾಗಿ ಎಂ.ಎನ್.ಅಹೋಬಳಪತಿ, ಸಿ.ಪಿ. ಮಾರುತಿ, ನಾಗತಿಹಳ್ಳಿ ಮಂಜುನಾಥ್, ಗೆಲುವು ಸಾಧಿಸಿದ್ದು,   ಜಿಲ್ಲಾ  ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ವಿ.ವೀರೇಶ್ ಅವರು ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಗಳಾಗಿ ವಿ.ಚಂದ್ರಪ್ಪ, ತಿಪ್ಪೇಸ್ವಾಮಿ ನಾಕಿಕೆರೆ, ಹೆಚ್.ತಿಪ್ಪೇಸ್ವಾಮಿ ಆಯ್ಕೆಯಾಗಿದ್ದು,  ಖಜಾಂಚಿಯಾಗಿ ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದರು. ರಾಜ್ಯಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್. ಸಿದ್ಧರಾಜು ಆಯ್ಕೆಯಾಗಿದ್ದಾರೆ.

ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಡೇಕುಂಟೆ ಮಂಜುನಾಥ್,  ಹುಚ್ಚವ್ವನಹಳ್ಳಿಪ್ರಸನ್ನ, ಜಿ.ಎನ್.ಮೂರ್ತಿ, ರವಿ, ದರ್ಶನ್, ಮಲ್ಲಾಪುರ, ಸಿ.ಎನ್.ಕುಮಾರ್, ಚೌಳೂರು ಮಂಜುನಾಥ್, ಎಸ್.ಟಿ.ನವೀನ್ ಕುಮಾರ್, ಗಿರೀಶ್, ರಾಜಶೇಖರ್, ರವಿ ಉಗ್ರಾಣ, ವಿಶ್ವನಾಥ್, ಕೆ.ಜಿ.ವೀರೇಂದ್ರ ಕುಮಾರ್, ಎಸ್.ಅಮಿತ್, ಪಿ.ಜೆ.ತಿಪ್ಪೇಸ್ವಾಮಿ ಗೆಲುವು ಸಾಧಿಸಿದ್ದಾರೆ.

About The Author

Leave a Reply

Your email address will not be published. Required fields are marked *