
ಹಿರಿಯೂರು :
ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಇಂದು ಹಿರಿಯೂರಿಗೆ ಭೇಟಿ ನೀಡುತ್ತಿರುವುದನ್ನು ತಾಲೂಕು ಬಿಜೆಪಿ ಘಟಕವು ಟೀಕಿಸಿದ್ದು, ಇದೊಂದು ಉಪಚುನಾವಣೆಯ ರಾಜಕೀಯ ಗಿಮಿಕ್ ಎಂಬುದಾಗಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಕೆ.ಅಭಿನಂದನ್ ಹೇಳಿದ್ದಾರೆ.
ಉಪಚುನಾವಣೆಯ ಘೋಷಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಏಕಾಏಕಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಸರ್ಕಾರ ತಂತ್ರವನ್ನು ರೂಪಿಸಿದೆ ಎಂಬುದಾಗಿ ಅವರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಪ್ರತಿ ಲೀಟರ್ ಹಾಲಿಗೆ ಎಂಟು ರೂಪಾಯಿ ಇದರ ಏರಿಕೆ ಮಾಡೋದಾಗಿ ಹೇಳಿ ಇದೀಗ 12 ರೂಪಾಯಿ ಪಡೆಯುತ್ತಿರುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿರುವ ಸರ್ಕಾರ ಹಿರಿಯೂರಿನ ಜನರನ್ನು ಮೆಚ್ಚಿಸಲು ಮುಖ್ಯಮಂತ್ರಿ ಭೇಟಿ ನೀಡುತ್ತಿದ್ದಾರೆ. ಆದರೆ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ
ಹಿರಿಯೂರು ಕ್ಷೇತ್ರದಲ್ಲಿ ಉಪಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತರಾತುರಿಯಲ್ಲಿ ಗುದ್ದಲಿ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಸರ್ಕಾರದ ಬಳಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಣವಿಲ್ಲ.
ಹೀಗಾಗಿ ಇದೀಗ ಘೋಷಣೆ ಮಾಡುತ್ತಿರುವ ಕಾಮಗಾರಿಗಳು ಕಾರ್ಯರೂಪಕ್ಕೆ ಬರುವ ಸಾಧ್ಯತೆ ಕಡಿಮೆ ಕೇವಲ ಮತದಾರರನ್ನು ಸೆಳೆಯುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಇದೊಂದು ಸಂಪೂರ್ಣ ಚುನಾವಣೆಯ ಗಿಮಿಕ್ ಎಂಬುದಾಗಿ ತಾಲೂಕು ಬಿಜೆಪಿ ಘಟಕ ಮುಖ್ಯಮಂತ್ರಿ ಭೇಟಿಯನ್ನು ಟೀಕಿಸಿದೆ.
