
ಹಿರಿಯೂರು :
ಕರ್ನಾಟಕದ ರಾಜಭವನಕ್ಕೆ ಮತ್ತೊಮ್ಮೆ ಬಿಜೆಪಿ ಹಿನ್ನೆಲೆಯಿಂದ ಪ್ರವೇಶಿಸಿರುವ ರಾಜಕಾರಣಿ ಡಾ.ಸುಧಾ ಯಾದವ್ ರವರನ್ನು ರಾಷ್ಟ್ರಪತಿ ದ್ರೌಪದಿ ಮುರುಮು ಅವರು ಡಾಕ್ಟರ್ ಸುಧಾ ಯಾದವ್ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಿಸಿದ್ದಾರೆ, ತಾವರ್ ಚೆಂದ್ ಗೆಹ್ಲೋಟ್ ಅವರು ರಾಜಭವನದಿಂದ ಹೊರ ನಡೆದಿದ್ದು, ಆ ಹುದ್ದೆಗೆ ಸುಧಾ ಯಾದವ್ ರವರು ನೇಮಕಗೊಂಡಿದ್ದಾರೆ ಕರ್ನಾಟಕದ ನೂತನ ರಾಜ್ಯಪಾಲರಾದ ಬಿಜೆಪಿ ಪ್ರಭಾವಿ ನಾಯಕಿ ಹಾಗೂ ಮಾಜಿ ಸಂಸದೆ ಶ್ರೀಮತಿ ಡಾ.ಸುಧಾಯಾದವ್ ರವರಿಗೆ “ಹಿರಿಯೂರ್ ನ್ಯೂಸ್” ತಂಡದಿಂದ ಅಭಿನಂದನೆಗಳನ್ನು ತಿಳಿಸಲಾಗಿದೆ.
ನೂತನ ರಾಜ್ಯಪಾಲರಾದ ಡಾ.ಸುಧಾಯಾದವ್ ರವರು ರಾಜಕೀಯ ಜೀವನದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಲಿ ಎಂಬುದಾಗಿ ಎಂಬುದಾಗಿ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್ ಯಾದವ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ, ಇವರುಗಳು ಶುಭಹಾರೈಸಿದ್ದಾರೆ.
