
ಹಿರಿಯೂರು :
ನಗರದ ಸರಕಾರಿ ಆಸ್ಪತ್ರೆಯಲ್ಲಿ ದಿವಂಗತ ಜಗದೀಶ್ ಧರೇಧರ್ ಇವರ ಹುಟ್ಟು ಹಬ್ಬದ ಪ್ರಯುಕ್ತ ರೋಟರಿ ಕ್ಲಬ್ ಹಿರಿಯೂರು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಿರಿಯೂರು ಇವರ ಸಂಯುಕ್ತಾಶ್ರಯದಲ್ಲಿ ಆಸ್ಪತ್ರೆಯ ಒಳರೋಗಿಗಳಿಗೂ ಮತ್ತು ಹೊರರೋಗಿಗಳಿಗೂ ಬ್ರೆಡ್ಡು ಮತ್ತು ಹಣ್ಣುಗಳ ವಿತರಣಾ ಕಾರ್ಯಕ್ರಮ ನೆರವೇರಿಸಲಾಯಿತು.
ದಿವಂಗತ ಜಗದೀಶ್ ಧರೇಧರ್ ರವರ ಮಗನಾದ ಹರ್ಷ ಅವರು ಈ ಕಾರ್ಯಕ್ರಮದ ದಾನಿಗಳಾಗಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿಯ ಅಧ್ಯಕ್ಷರಾದ ಹೆಚ್.ಡಿ.ವಸಂತ್ ಕುಮಾರ್ ಅವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಿ.ಕೆ.ನಾಗಣ್ಣ, ದೇವರಾಜ್ ಮೂರ್ತಿ, ಎಂ.ಎಸ್.ರಾಘವೇಂದ್ರ, ಸಣ್ಣಭೀಮಣ್ಣ, ಜನೌಷಧಿ ಕೇಂದ್ರದ ಮಾಲೀಕರಾದ ಆರ್.ಪಿ.ರವಿಕುಮಾರ್,ರೋಟರಿ ಕಾರ್ಯದರ್ಶಿಯಾದ ಚಂದ್ರಹಾಸ್, ಡಾ. ಹರೀಶ್ ಭಾಗವಹಿಸಿದ್ದರು.
