October 6, 2026
00002

ಹಿರಿಯೂರು:    

ದಲಿತ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟು, ಉನ್ನತ ವ್ಯಾಸಂಗ ಮಾಡಿ, ಸ್ವಾವಲಂಬಿ ಬದುಕು ಕಟ್ಟಿಕೊಂಡಾಗ ಮಾತ್ರ ದಲಿತ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂಬುದಾಗಿ ಕೋಡಿಹಳ್ಳಿ ಆದಿಜಾoಬವ ಮಠದ ಪರಮಪೂಜ್ಯ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ಶ್ರೀಶೈಲ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪರಿವರ್ತನವಾದ  ತಾಲ್ಲೂಕು ಶಾಖೆಯ ಉದ್ಘಾಟನೆ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.              

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ ಸಂಘಟನೆ ಹೋರಾಟದ ತತ್ವಗಳನ್ನು ಬದುಕಿಗೆ ಪೂರಕವಾಗಿ ಬಳಸಿಕೊಳ್ಳುವುದು ಅಗತ್ಯ, ದಲಿತರು ಅಂಬೇಡ್ಕರ್ ಅವರನ್ನು ಕೇವಲ ಸ್ಮರಿಸಿ ಹೊಗಳಿದರೆ ಸಾಲದು, ಅವರ ಪರಿಶ್ರಮ, ಸಾಧನೆ ಮತ್ತು ಚಿಂತನೆಗಳತ್ತ ಗಮನ ಹರಿಸಬೇಕು ಎಂದು ಸ್ವಾಮೀಜಿ ಹೇಳಿದರು.

ಹಿರಿಯ ದಲಿತ ಹೋರಾಟಗಾರ ಜೀವೇಶ್ ಬೋರನಕುಂಟೆ ಮಾತನಾಡಿ, ಜಗತ್ತು ಇಂದು ವಿಜ್ಞಾನ ತಂತ್ರಜ್ಞಾನದಿಂದ ಬದಲಾದರೂ ಸಮಾಜದಲ್ಲಿ ಇರುವ ಮೌಢ್ಯ ಕಂದಾಚಾರ ಮೂಡನಂಬಿಕೆ ಅಸ್ಪೃಶ್ಯತೆ ಆಚರಣೆಗಳು ಇನ್ನೂ ಉಳಿದಿರುವುದು ಶೋಚನೀಯ ಸಂಗತಿ, ರಾಜ್ಯದಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯ, ಹಲ್ಲೆ, ಕೊಲೆಪ್ರಕರಣಗಳು ಕಡಿಮೆಯಾಗಬೇಕು ಎಂದು ಹೇಳಿದರು.

ಶ್ರೀ ಬಾಲು ಮಾತನಾಡಿ, ದಲಿತರು ಶಿಕ್ಷಣವಂತರಾಗಿ ಉತ್ತಮ ಬದುಕು ಕಟ್ಟಿಕೊಳ್ಳುವ ಮೂಲಕ ಸ್ವಾಭಿಮಾನಿಗಳಾಗಿ ಬದುಕಬೇಕು, ಈ ಮೂಲಕ  ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದುಕೊಳ್ಳಬೇಕು ಎಂಬುದಾಗಿ ಹೇಳಿದರು.

ಸಮಾಜ ಸೇವಕ ಜಿ. ಬಾಲಾಜಿ ದಲಿತ ಸ್ವಾಭಿಮಾನಿ ಹೋರಾಟ ಸಮಿತಿಯ ತಾಲ್ಲೂಕು ಕಾರ್ಯಧ್ಯಕ್ಷ ಹೆಗ್ಗೆರೆ ಕೆ.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂವಿಧಾನ ರಕ್ಷಣಾ ಸಮಿತಿಯ ರಾಜ್ಯ ಅಧ್ಯಕ್ಷ ಕೆ.ರಾಮಚಂದ್ರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಕೋದಂಡರಾಮ ಘಾಟ್ ಚಂದ್ರಪ್ಪ, ಕೂನಿಕೆರೆ ಮಾರುತೇಶ್, ಜನ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷ ರಂಗಪ್ಪಯಾದವ್, ರೈತ ಹೋರಾಟಗಾರ ಕೆ.ಸಿ.ಹೊರಕೇರಪ್ಪ, ಶ್ರೀಮತಿ ಸುಭದ್ರಮ್ಮ, ಮಹೇಶ್ ಪಟ್ರೆಹಳ್ಳಿ, ತಿಮ್ಮಯ್ಯ ಬಗ್ಗನಾಡು, ಶ್ರವಣಗೆರೆರವಿ, ಕೃಷ್ಣಾಪುರ ಮೋಹನ, ಬರಂಪುರ ಕಣಮ್ಮಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *