October 5, 2026
0004

ಹಿರಿಯೂರು :

ಮಹಾತ್ಮ ಗಾಂಧೀಜಿಯವರ “ಸ್ವಚ್ಛತೆಯೇ ಸೇವೆ” ಎಂಬ ಸಂದೇಶವನ್ನು ಸಾರ್ವಜನಿಕರು ಅರಿತು ಜಿವಿಪಿ ಸ್ಥಳಗಳಲ್ಲಿ ಕಸ ಹಾಕದೆ, ಮನೆ-ಮನೆಯಿಂದಲೇ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಕಸದ ವಾಹನಕ್ಕೆ ನೀಡುವ ಮೂಲಕ ಸ್ವಚ್ಛ ಹಿರಿಯೂರು ನಿರ್ಮಾಣಕ್ಕೆ ಸಹಕರಿಸಬೇಕು ಎಂಬುದಾಗಿ ನಗರಸಭೆಯ ಪೌರಾಯುಕ್ತರಾದ ಎ.ವಾಸೀಂ ಹೇಳಿದರು.

ಭಾರತ ಸ್ವಚ್ಛ ದಿನದ ಪ್ರಯುಕ್ತ ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 26 ,27 ವಾರ್ಡಗಳಲ್ಲಿನ ಚಾನೆಲ್ ನ ಬಲಬದಿ ಮತ್ತು ಎಡಬದಿ ಪಾಯಿಂಟ್‌ಗಳನ್ನು ಸಂಪೂರ್ಣವಾಗಿ ಕ್ಲಿಯರ್ ಮಾಡಿ ಸ್ವಚ್ಛಗೊಳಿಸಿ, ನಂತರ ಅವರು ಮಾತನಾಡಿದರು.

ಕಸ ಮುಕ್ತ, ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ಹಿರಿಯೂರು ನಗರ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮುಂದಿನ ದಿನಗಳಲ್ಲಿ ನಗರದ ನಾಗರೀಕರು ಕಸ ವಿಲೇವಾರಿ ಮಾಡುವುದನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ನಗರಸಭೆಯೊಂದಿಗೆ ಕೈಜೋಡಿಸಬೇಕು ಎಂಬುದಾಗಿ ಹೇಳಿದರು.

ನಗರಸಭೆಯ ಚಾನೆಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಸ ಸಂಗ್ರಹವಾಗುವ ಸ್ಥಳಗಳನ್ನು ಗುರುತಿಸಿ, ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ಥಳೀಯ ಸಾರ್ವಜನಿಕರ ಸಹಕಾರದೊಂದಿಗೆ ಕಸವನ್ನು ತೆರವುಗೊಳಿಸಿ ಸ್ಥಳವನ್ನು ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸಿಂ, ಆರೋಗ್ಯ ನಿರೀಕ್ಷಕರಾದ ಸುನಿಲ್ ಕುಮಾರ್, ಅಶೋಕ್ ಕುಮಾರ್, ಮಹಾಲಿಂಗರಾಜು, ಪೌರಕಾರ್ಮಿಕರು ಸ್ವಚ್ಛ ಸಿಬ್ಬಂದಿಗಳು ಕಮ್ಯೂನಿಟಿ ಮೊಬಿಲ್ಜರ್ಸ್ ಗಳು, ಡ್ರೈವರ್ ಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *