September 13, 2026
535121987_1913430372844959_4161103002009292141_n

ಹಿರಿಯೂರು :

ಜಗತ್ತಿನ ಸೌಂದರ್ಯವನ್ನು ಹಾಗೂ ಜೀವನದ ಅತ್ಯುತ್ತಮ ಮಧುರ ಕ್ಷಣಗಳನ್ನು, ಬದುಕಿನ ಮರೆಯದ ನೆನಪುಗಳನ್ನು ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿಯುವ ಮೂಲಕ ಬದುಕಿನ ಅಮೂಲ್ಯ ಕ್ಷಣಗಳನ್ನು ಆಗಾಗ ಮೆಲುಕು ಹಾಕಲು ಸಹಾಯಕವಾದ ಛಾಯಾಗ್ರಾಹಕರುಗಳ ಕಾರ್ಯ ನಿಜಕ್ಕೂ ಪ್ರಶಂಸನೀಯವಾದುದು ಎಂಬುದಾಗಿ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರಾದ ಆಲೂರುಹನುಮಂತರಾಯಪ್ಪ ಅವರು ಹೇಳಿದ್ದಾರೆ.

ವಿಶ್ವ ಛಾಯಾಚಿತ್ರಗ್ರಾಹಕರ ದಿನಾಚರಣೆಯ ಅಂಗವಾಗಿ “ಹಿರಿಯೂರುನ್ಯೂಸ್” ತಂಡದಿಂದ ಇಂತಹ ಛಾಯಾಗ್ರಾಹಕರುಗಳಿಗೆ ಹಾರ್ದಿಕ ಶುಭಾಶಯಗಳನ್ನು ಕೋರಿ ಅವರು ಸುದ್ದಿವಾಹಿನಿಯೊಂದಿಗೆ ಮಾತನಾಡಿದರು.

ಈ ಛಾಯಾಗ್ರಾಹಕರುಗಳು ಸಮಾಜದ ಬಹುಮುಖ್ಯವಾದ ಬದುಕಿನ ಅಂಗವಾಗಿದ್ದು, ಅವರುಗಳು ಸಮಾಜದ ವಿವಿಧ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತಾರೆ. ಅಲ್ಲದೆ, ಪತ್ರಿಕೆಗಳು ಹಾಗೂ ಪತ್ರಕರ್ತರುಗಳಿಗೂ ಯಾವುದೇ ಕಾರ್ಯಕ್ರಮದ ಫೋಟೋ ಒದುಗಿಸುವವರು ಇವರೇ ಆಗಿದ್ದು, ಇಂತಹ ಛಾಯಾಗ್ರಾಹಕರುಗಳಿಗೆ “ಹಿರಿಯೂರುನ್ಯೂಸ್” ತಂಡದ ವತಿಯಿಂದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆ ರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್ ಯಾದವ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ, ಇವರುಗಳು ಶುಭಹಾರೈಸಿದ್ದಾರೆ.

About The Author

Leave a Reply

Your email address will not be published. Required fields are marked *