July 29, 2026
000004

ಹಿರಿಯೂರು :                          

ತಾಲ್ಲೂಕಿನಲ್ಲಿ ಎಸ್.ಆರ್.ಎಸ್.ಪ್ರಕ್ರಿಯೆ ಪ್ರಾರಂಭವಾಗಿದ್ದು, ಸಾರ್ವಜನಿಕರಿಂದ ಅಗತ್ಯ ದಾಖಲೆಗಳನ್ನು ಪಡೆದು ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಉಳಿಸುವ ಗುರಿ ಹೊಂದಲಾಗಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಹೇಳಿದರು.

ನಗರದ ತಾಲ್ಲೂಕು ಆಡಳಿತ ಹಾಗೂ ನಗರಸಭೆ ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಬಿ.ಎಲ್.ಓ ಗಳು ನಡೆಸುತ್ತಿರುವ ಎಸ್.ಆರ್.ಎಸ್.ಪ್ರಕ್ರಿಯೆಯ ಪರಿಶೀಲನೆಯನ್ನು ನಡೆಸಿ, ಹಿರಿಯ ಪತ್ರಕರ್ತರಾದ ಆಲೂರು ಹನುಮಂತರಾಯಪ್ಪರವರಿಗೆ  ಎನ್ಯುಮರೇಶನ್ ಫಾರ್ಮ್ ವಿತರಿಸಿ, ನಂತರ ಅವರು ಮಾತನಾಡಿದರು.

ಪ್ರತಿ ಮನೆಗೆ ಬಿ.ಎಲ್.ಓ ಗಳು ಬಂದು ಎನ್ಯುಮರೇಶನ್ ಫಾರ್ಮ್ ಗಳನ್ನು ನೀಡುತ್ತಿದ್ದಾರೆ, ಪ್ರತಿಯೊಬ್ಬ ನಾಗರೀಕರೂ ಇತ್ತೀಚಿನ ಭಾವಚಿತ್ರ ಹಾಗೂ ಎನ್ಯುಮರೇಶನ್ ಫಾರ್ಮ್ ಪಡೆದು, ಭರ್ತಿ ಮಾಡಿ, ಬಿ.ಎಲ್.ಓ ಗಳಿಗೆ ವಾಪಾಸ್ ನೀಡಬೇಕು, ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಬರುವ ಎಲ್ಲಾ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಉಳಿಸುವ ಗುರಿಯನ್ನು ಹೊಂದಲಾಗಿದೆ.

ಸಾರ್ವಜನಿಕರು ಎನ್ಯುಮರೇಶನ್ ಫಾರ್ಮ್ ಅನ್ನು ಬಿ.ಎಲ್.ಓಗಳಿಗೆ ವಾಪಾಸ್ ನೀಡಿದ್ದಲ್ಲಿ ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಲು ಸಾಧ್ಯ, 2002 ರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವಾದವರು ಮತ್ತು ಲಿಂಕ್ ಇಲ್ಲದವರ ಹೆಸರು ನಿಮ್ಮ ಎನ್ಯುಮರೇಶನ್ ಫಾರ್ಮ್ ನಲ್ಲಿ ಜನರೇಟ್ ಆಗಿರುವುದರಿಂದ ಅವರನ್ನು ವಿಚಾರಣೆಗೆ ಕರೆದು ಅವರಲ್ಲಿರುವ ದಾಖಲೆಗಳನ್ನು ಪಡೆದು ಸೇರ್ಪಡೆಗೆ ಕ್ರಮ ತೆಗೆದುಕೊಳ್ಳಲಾಗುವುದು.

ನಗರದ ನಗರಸಭೆ ಕಾರ್ಯಾಲಯ ಹಾಗೂ ಗ್ರಾಮೀಣ ಭಾಗದ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮತದಾರರ ಸೌಲಭ್ಯದ ಕೇಂದ್ರವನ್ನು ತೆರೆಯಲಾಗಿದೆ, ಮತದಾರರಿಗೆ ಯಾವುದೇ ಅನುಮಾನಗಳಿದ್ದರೂ ಈ ಕೇಂದ್ರದ ಸಿಬ್ಬಂದಿಗಳ ಸಹಕಾರ ಪಡೆದು ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಎಂಬುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ನಗರಸಭೆ ಅಶ್ರಫ್ ವುಲ್ಲಾ, ಹಿರಿಯ ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ, ಸೇರಿದಂತೆ ಬಡಾವಣೆಯ ನಾಗರೀಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *