May 31, 2026
004

ಹಿರಿಯೂರು :     

ತಾಲ್ಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ವಾಣಿವಿಲಾಸ ಜಲಾಶಯಕ್ಕೆ ಭದ್ರೆಯ ನೀರನ್ನು ಹರಿಸಿದ ಕೀರ್ತಿ ಸಚಿವರಾದ ಡಿ.ಸುಧಾಕರ್ ರವರಿಗೆ ಸಲ್ಲುತ್ತದೆ, ಬಡವರ, ರೈತರ, ಮಹಿಳೆಯರ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಡಿ.ಸುಧಾಕರ್ ರವರ ನಿಧನ ತಾಲ್ಲೂಕಿನ ಜನತೆಗೆ ತುಂಬಲಾರದ ನಷ್ಟವಾಗಿದೆ ಎಂಬುದಾಗಿ ಯಳನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಧ್ಯಕ್ಷರಾದ ಕಿರಣ್ ಟಿ.ಗೌಡರವರು ಸಂತಾಪ ಸೂಚಿಸಿದರು.

ತಾಲ್ಲೂಕಿನ ಯಳನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಚಿವರಾದ ಡಿ.ಸುಧಾಕರ್ ರವರ ನಿಧನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಸಂತಾಪ ಸಭೆಯಲ್ಲಿ ಯಳನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಮೂಡಲಗಿರಿಯಪ್ಪ, ನಿರ್ದೇಶಕರುಗಳಾದ ಶಣ್ಮುಖಪ್ಪ, ಕರಿಯಪ್ಪ, ನಳಿನಾಕ್ಷಿ, ಶಿವಮ್ಮ, ಎಸ್.ಗಿರೀಶ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರುಗಳಾದ ದಯಾನಂದ, ಹರೀಶ್ ಗೌಡ, ಹಾಗೂ ಸೊಸೈಟಿಯ ಕಾರ್ಯದರ್ಶಿ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *