
ಹಿರಿಯೂರು :
ನಗರದ ಕುವೆಂಪು ನಗರದ ಬಡಾವಣೆ 2ನೇ ಕ್ರಾಸ್ ರಸ್ತೆಯಲ್ಲಿ ಗುರುವಾರ ಸಂಜೆ ಪತ್ರಕರ್ತರಾದ ಗೋಸಿಕೆರೆ ರಂಗನಾಥ್ ರವರ ಮನೆಯ ಮುಂಭಾಗದಲ್ಲಿ ಹೊತ್ತು ಮುಳುಗುವ ಸಂದರ್ಭದಲ್ಲಿ ಕಾರೊಂದು ಹೋಗುವ ರಭಸದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದುಕೊಂಡು ಹೋಗಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಅಲ್ಲಾಡಿ ಬುಡಕ್ಕೆ ತುಂಡಾಗಿದ್ದು, ವೈರುಗಳ ಮೂಲಕ ನೇತಾಡುವಂತಾಗಿತ್ತು.

ಅಕಸ್ಮಾತ್ ಆ ಕಂಬ ಆರಸ್ತೆಯಲ್ಲಿ ನಡೆದಾಡುವವರ ಮೇಲೆ ಅಥವಾ ವಾಹನಗಳ ಮೇಲೆ ಬಿದ್ದಿದ್ದರೆ ದೊಡ್ಡ ಅಪಾಯವಾಗುವ ಸಂಭವವಿತ್ತು. ಆದರೆ ಅದೃಷ್ಟವಷಾತ್ ಹಾಗೆ ಆಗಲಿಲ್ಲ, ಸುದ್ದಿ ತಿಳಿದ ತಕ್ಷಣವೇ ಈ ಸುದ್ದಿಯನ್ನು ನಮ್ಮ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರಾದ ಆಲೂರು ಹನುಮಂತರಾಯಪ್ಪನವರು ಬೆಸ್ಕಾಂ ಅಸಿಸ್ಟೆಂಟ್ ಎಂಜಿನಿಯರ್ ಹರೀಶ್ ರವರಿಗೆ ತಿಳಿಸಲಾಯಿತು.

ಸುದ್ದಿ ತಿಳಿದ ತಕ್ಷಣ ಅಸಿಸ್ಟೆಂಟ್ ಎಂಜಿನಿಯರ್ ಹರೀಶ್ ರವರು ತಮ್ಮ ಲೈನ್ ಮ್ಯಾನ್ ಗಳ ತಂಡ ಹಾಗೂ ಕ್ರೈನ್ ನೊಂದಿಗೆ ಸ್ಥಳಕ್ಕೆ ಧಾವಿಸಿ, ಬಂದು ಸಂಜೆ ಕತ್ತಲಾಗುತ್ತಿದ್ದರೂ ಲೆಕ್ಕಿಸದೆ ಕ್ರೈನ್ ಬೆಳಕಿನಲ್ಲಿ ಲೈನ್ ಮ್ಯಾನ್ ಗಳ ಸಹಕಾರದೊಂದಿಗೆ ಹೊಸ ಕಂಬವನ್ನು ನಿಲ್ಲಿಸಿ, ಎಲ್ಲಾ ಮನೆಗಳ ಮೇನ್ಸ್ ವೈರ್ ಗಳನ್ನು ಸರಿಪಡಿಸಿ, ಕಂಬಕ್ಕೆ ಕನೆಕ್ಟ್ ಮಾಡಿ, ಬಡಾವಣೆ ನಿವಾಸಿಗಳಿಗೆ ತಕ್ಷಣವೇ ವಿದ್ಯುತ್ ಸರಬರಾಜು ನೀಡಿದರು.

“ಹಿರಿಯೂರುನ್ಯೂಸ್” ತಂಡದಿಂದ ಮಾಡಿದ ಮನವಿಗೆ ಸ್ಪಂದಿಸಿ, ಅತಿ ಜರೂರಾಗಿ ತಮ್ಮ ಲೈನ್ ಮ್ಯಾನ್ ಗಳ ತಂಡದೊಂದಿಗೆ ಬಂದು ಕತ್ತಲನ್ನೂ ಲೆಕ್ಕಿಸದೆ ಕೆಲಸ ನಿರ್ವಹಿಸಿ, ಗ್ರಾಹಕರಿಗೆ ವಿದ್ಯುತ್ ಸರಬರಾಜು ನೀಡಿದ ಎಇಇ ಹರೀಶ್ ರವರಿಗೆ ಹಾಗೂ ಅವರ ಬೆಸ್ಕಾಂ ಲೈನ್ ಮ್ಯಾನ್ ಗಳ ತಂಡಕ್ಕೆ ಬಡಾವಣೆ ಜನರ ಪರವಾಗಿ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರಾದ ಆಲೂರು ಹನುಮಂತರಾಯಪ್ಪನವರು ಹಾಗೂ ಪತ್ರಕರ್ತರಾದ ಗೋಸಿಕೆರೆರಂಗನಾಥ್ ರವರು ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
