
ಹಿರಿಯೂರು :
ನಗರದ ನೆಹರು ಮೈದಾನದಲ್ಲಿರುವ ರೋಟರಿ ಸಭಾಭವನದಲ್ಲಿ ಇದೇ ಮೇ 6ರಂದು ಬುಧವಾರದಂದು ದೈವಾಧೀನರಾದ ಕೀರ್ತಿಶೇಷ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ.ಎಂ.ಎನ್.ಶ್ರೀಪತಿರವರ “ನುಡಿನಮನ” ಕಾರ್ಯಕ್ರಮವನ್ನು ಇದೇ ಮೇ 17 ರಂದು ಭಾನುವಾರ ಸಂಜೆ 5ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಎಂ.ಎಸ್.ರಾಘವೇಂದ್ರ ತಿಳಿಸಿದ್ದಾರೆ.
ನಗರದ ರೋಟರಿ ಸಂಸ್ಥೆ ಹಿರಿಯೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಿರಿಯೂರುಶಾಖೆ, ತಾಲೂಕು ವೈದ್ಯರ ಸಂಘ ಹಿರಿಯೂರು, ಐ.ಎಮ್.ಎ ಹಿರಿಯೂರು, ವಿಶ್ವಭಾರತಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಿರಿಯೂರು, ಹಾಸ್ಯ ಪ್ರಿಯರ ಸಂಘ ಹಿರಿಯೂರು, ಇನ್ನರ್ವಿಲ್ ಹಿರಿಯೂರು, ವೇದಪತ್ತಿನ ಸಹಕಾರ ಸಂಘ ನಿಯಮಿತ ಹಿರಿಯೂರು, ಇವರುಗಳ ಸಂಯುಕ್ತ ಆಶ್ರಯದಲ್ಲಿ “ನುಡಿನಮನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಿವೃತ್ತ ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ.ಎಂ.ಎನ್.ಶ್ರೀಪತಿರವರು ದೈವಾಧೀನರಾಗಿರುವ ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ “ನುಡಿನಮನ” ಕಾರ್ಯಕ್ರಮಕ್ಕೆ ಡಾ.ಎಂ.ಎನ್.ಶ್ರೀಪತಿಯವರ ಅಭಿಮಾನಿಗಳು, ನಗರದ ನಾಗರೀಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ಅವರು ಮನವಿ ಮಾಡಿದ್ದಾರೆ.
