May 5, 2026
0002

ಹಿರಿಯೂರು :

ನಗರದ ಶ್ರೀಗಜಾನನ ಎಂಟರ್ ಪ್ರೈಸಸ್ ಮಾಲೀಕರು, ರೋಟರಿಯ ಸದಸ್ಯರು, ಶ್ರೀಶುಭೋದಯ ಶೈಕ್ಷಣಿಕ ಸೇವಾ ವೃದ್ದಾಶ್ರಮದ ದಾನಿಗಳು, ಮಾರ್ಗದರ್ಶಕರು, ಹಿತೈಷಿಗಳು ಆದ ಪ್ರಶಾಂತ್ ರವರು ಪ್ರತಿವರ್ಷದಂತೆ ಈ ವರ್ಷವೂ ಸಹ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಆಶ್ರಮದ ಎಲ್ಲಾ ಹಿರಿಯರಿಗೆ ಬೆಳಗಿನ ತಿಂಡಿಯ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂಬುದಾಗಿ ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಹೇಳಿದರು.

ತಾಲ್ಲೂಕಿನ ಭೀಮನಬಂಡೆ ವೃದ್ಧಾಶ್ರಮದಲ್ಲಿ ಶ್ರೀಗಜಾನನ ಎಂಟರ್ ಪ್ರೈಸಸ್ ಮಾಲೀಕರಾದ ಪ್ರಶಾಂತ್ ರವರ ಹುಟ್ಟುಹಬ್ಬದ ಪ್ರಯುಕ್ತ ಆಶ್ರಮದ ಎಲ್ಲಾ ಹಿರಿಯರಿಗೆ ಬೆಳಗಿನ ತಿಂಡಿಯ ವ್ಯವಸ್ಥೆ ಕಲ್ಪಿಸಿ, ನಂತರ ಅವರು ಮಾತನಾಡಿದರು.

ಶ್ರೀಯುತ ಪ್ರಶಾಂತ್ ರವರ ಸೇವಾಮನೋಭಾವಕ್ಕೆ ಶ್ರೀಆಶ್ರಮ ಸಮಿತಿ ವತಿಯಿಂದ ಅವರಿಗೆ ಹಾಗೂ ಅವರ ಕುಟುಂಬವರ್ಗದವರಿಗೆ ಭಗವಂತನ ಅನುಗ್ರಹ ಪ್ರಾಪ್ತಿಯಾಗಲೆಂದು ಆಶ್ರಮದ ನಿವಾಸಿಗಳ ಪರವಾಗಿ  ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸುತ್ತೇವೆ ಎಂಬುದಾಗಿ ಅವರು ಹೇಳಿದರು.

ಕುಟುಂಬ ಸಮೇತರಾಗಿ ಶ್ರೀ ಆಶ್ರಮಕ್ಕೆ ಭೇಟಿ ನೀಡಿದ್ದ ಪತ್ನಿ ಸೌಮ್ಯ, ಹಾಗೂ ಮಗ ಸಮರ್ಥ ಇವರುಗಳು ಗೋಪೂಜೆ ಹಾಗೂ ಸದ್ಗುರು ಶಿರಡಿ ಸಾಯಿಬಾಬ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ರೋಟರಿಯ ಸದಸ್ಯರು ದಾನಿಗಳು ಆದ ಬಾಲಾಜಿ, ಚಂದ್ರಕೀರ್ತಿ ಗುಜ್ಜಾರ್, ಹಾಗೂ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *