
ಹಿರಿಯೂರು :
ತಾಲ್ಲೂಕಿನ ವಿ.ವಿ.ಸಾಗರದಲ್ಲಿ ಖಂಡೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ 2002ರ ಹಳೆಯ ವಿದ್ಯಾರ್ಥಿಗಳು ಸುಮಾರು 24 ವರ್ಷಗಳ ನಂತರ ಎಲ್ಲರೂ ಸೇರಿ ಹಮ್ಮಿಕೊಳ್ಳಲಾಗಿದ್ದ “ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಪರಿಚಯ ಮಾಡಿಕೊಂಡು ತಮ್ಮ ಜೀವನದ ಸಾಧನೆಯ ಬಗ್ಗೆ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು. ತದನಂತರ ಸ್ವರ್ಗವಾಸಿ ಆದ ಸ್ನೇಹಿತೆ ಸೌಮ್ಯ, ರೂಪ, ಸ್ನೇಹಿತರಾದ ದಾದಾಪೀರ್, ಹನುಮಂತರಾಯ ರವರಿಗೆ ಎಲ್ಲಾ ಗೆಳೆಯ, ಗೆಳತಿಯರು ಮೌನ ಆಚರಣೆ ಮಾಡುವ ಮೂಲಕ ಸಂತಾಪ ಸೂಚಿಸಿದರು.

ಆ ನಂತರ ಈ ಸಾಲಿನ ಹಳೆಯ ವಿದ್ಯಾರ್ಥಿಯಾದ ಪ್ಯಾರಮಿಲಿಟರಿ ಎಸ್.ಎಸ್.ಬಿ ಯೋಧ ಜಿ.ಶ್ರೀನಿವಾಸ್ ರವರು ತನ್ನ ಸ್ನೇಹಿತ, ಸ್ನೇಹಿತೆಯರಿಗೆ ಎಸ್.ಎಸ್.ಬಿ ಯ ಚಿನ್ಹೆ ಇರುವ ಮೋಮೆಂಟೋವನ್ನು ನೆನಪಿನ ಕಾಣಿಕೆಯಾಗಿ ನೀಡಿದರು. ನಂತರ ವಿದ್ಯಾರ್ಥಿಗಳಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ಶಿವುಖಂಡೇನಹಳ್ಳಿ, ಪ್ರವೀಣ್, ಬಾಬು ಜಗಜೀವನ್, ಟಿ.ಮಂಜುನಾಥ್, ಪೊಲೀಸ್ ಇಲಾಖೆ ಅಲ್ತಾಫ್, ಸೋಮಶೇಖರ್, ಸತೀಶ್ ದಳಪತಿ ,ಯೋಗನಂದ, ಬಿ.ಶ್ರೀನಿವಾಸ್, ನರಸಿಂಹಮೂರ್ತಿ, ರಾಜ್ ಕುಮಾರ್, ಎಂ.ರಮೇಶ್, ಎಸ್.ನಾಗರಾಜ್, ಚಿದಾನಂದ, ಶಿವಮೂರ್ತಿ, ಮಹಾಲಿಂಗಪ್ಪ, ಮಾರುತಿ ಹನುಮಂತರಾಯ ಮತ್ತು ಹಳೆಯ ವಿದ್ಯಾರ್ಥಿನಿಯರಾದ ಅಂಬಾದೇವಿ, ಶಿಕ್ಷಕಿ ವಿಮಲಾಕ್ಷಿ, ಮಂಜುಳ, ಆರೋಗ್ಯ ಇಲಾಖೆ ಶಶಿಕಲಾ, ಲತಾ, ಕವಿತ, ರೂಪ, ಪುಷ್ಪ, ದಯಾವತಿ, ಗಿರಿಜಮ್ಮ, ಶಾರದ ಇತರರು ಉಪಸ್ಥಿತರಿದ್ದರು.
