
ಚಿತ್ರದುರ್ಗ :
ನಗರದ ಕೆಳಗೋಟೆ ಪ್ರದೇಶದಲ್ಲಿ ರಿ.ಸ.ನಂ. 72, 75, 74, 78, 79, ಹಾಗೂ ಇನ್ನು ಮುಂದಿನ ಸರ್ವೇ ನಂಬರ್ ಗಳಲ್ಲಿ ರಾಜಕಾಲುವೆ ಒತ್ತುವರಿ ಆಗಿರುವ ಬಗ್ಗೆ ಮತ್ತು ಒತ್ತುವರಿ ತೆರವು, ಒತ್ತುವರಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಆದೇಶಿಸಿರುವ ಆದೇಶಗಳನ್ನು ಈ ಕೂಡಲೇ ತೆರವುಗೊಳಿಸಬೇಕು ಎಂಬುದಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಮಹೇಶ್ ನಗರಂಗೆರೆ ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ, ಅಪರ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ, ಅರ್ಪಿಸಿ ನಂತರ ಅವರು ಮಾತನಾಡಿದರು.
ಜಿಲ್ಲೆಯ ಹಾಗೂ ತಾಲೂಕಿನ ಕಂದಾಯ ಇಲಾಖೆಯಲ್ಲಿ ಬರುವ ಸರ್ಕಾರಿ ಆಸ್ತಿಗಳು ಒತ್ತುವರಿಯಾಗಿರುವ ಬಗ್ಗೆ ನಿಮ್ಮ ಬಳಿ ದೂರನ್ನು ಹೇಳಲು ಬರುವ ಪ್ರಾಮಾಣಿಕ ಕೆಆರ್.ಎಸ್ ಪಕ್ಷದ ಸೈನಿಕರಿಗೆ ಹಾಗೂ ಸಾಮಾನ್ಯ ಜನರ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಅಸಡ್ಡೆ ತೋರುವುದು ಸರಿಯಲ್ಲ ಎಂಬುದಾಗಿ ಹೇಳಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರಾದ ಕೃಷ್ಣಪ್ಪ ಮಾತನಾಡಿ, ಸರ್ಕಾರಿ ಜಲಮೂಲಗಳನ್ನು ರಕ್ಷಣೆ ಮಾಡುವವರು ನೀವೇಆಗಿದ್ದು, ನ್ಯಾಯಾಲಯಗಳ ಆದೇಶ ಮತ್ತು ಕರ್ನಾಟಕ ಸರ್ಕಾರದ ಸುತ್ತೋಲೆಗಳನ್ನು ಮೀರಿ ಹಾಗೂ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಸರ್ಕಾರಿ ಆಸ್ತಿಗಳನ್ನು ಹೊತ್ತುವರಿ ಮಾಡಿಕೊಳ್ಳಲುಪ್ರಭಾವಿಭೂಗಳ್ಳರಿಗೆ ಅನುಕೂಲವಾಗುವಂತೆ ಆದೇಶಿಸುವುದು ಸರಿಯಲ್ಲ ಎಂದರಲ್ಲದೆ,
ಸರ್ಕಾರಿ ಜಲ ಆಸ್ತಿಗಳಲ್ಲಿ ಒಂದಾದ ರಾಜ ಕಾಲುವೆ ಹಳ್ಳವನ್ನು ಒತ್ತುವರಿ ಮಾಡಿಕೊಳ್ಳಲು ಭೂಗಳ್ಳರಿಯ ಅನುಕೂಲವಾಗುವಂತಹ ಈ ಕಾನೂನು ಬಾಹಿರ ಆದೇಶವನ್ನು ರದ್ದುಪಡಿಸಿ, ಒತ್ತುವರಿಯಾಗಿರುವ ಹಳ್ಳ ಪ್ರದೇಶವನ್ನು ಮತ್ತು ದಾಖಲೆಗಳನ್ನು ಕೆಳಗೋಟೆ ಗ್ರಾಮದ ಮೂಲ ನಕ್ಷೆಯಂತೆ ಸರಿಪಡಿಸಿ ಮುಚ್ಚಿರುವ ಹಳ್ಳ ಪ್ರದೇಶದ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿಯಾದ ಈ ಪ್ರದೇಶವನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಮಹೇಶ್ ನಗರಂಗೆರೆ, ಎಸ್.ಸಿ.ಎಸ್.ಟಿ ಘಟಕದ ರಾಜ್ಯ ಕಾರ್ಯದರ್ಶಿ ಸಿ.ಎನ್.ಮಾರುತಿ, ರೈತ ಘಟಕದ ರಾಜ್ಯ ಕಾರ್ಯದರ್ಶಿ ನಾಗರೆಡ್ಡಿ ಬೇಡರೆಡ್ಡಿಹಳ್ಳಿ, ಚಳ್ಳಕೆರೆ ತಾಲ್ಲೂಕು ಉಪಾಧ್ಯಕ್ಷರಾದ ಜಬೀಉಲ್ಲಾ, ಚಳ್ಳಕೆರೆ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಪಾಪಯ್ಯ, ಚಿತ್ರದುರ್ಗ ತಾಲೂಕು ಸಂಘಟನಾ ಕಾರ್ಯದರ್ಶಿ ತೌಸಿಫ್ ರೆಹಮಾನ್, ಚಿತ್ರದುರ್ಗ ಸಂಘಟನಾ ಕಾರ್ಯದರ್ಶಿ ಮುಸ್ತಾಕ್ ಅಹಮದ್, ಪಕ್ಷದ ಸೈನಿಕರಾದ ದಾದಾಪೀರ್, ಮಹಬೂಬ್, ನಾಗರಾಜ್ ಉಪಸ್ಥಿತರಿದ್ದರು.
