
ಹಿರಿಯೂರು:
ನಗರದ ನೆಹರು ಮಾರುಕಟ್ಟೆಯ ಬಸ್ ನಿಲ್ದಾಣದಲ್ಲಿ ಸುವರ್ಣ ದೀಪ ಟ್ರಸ್ಟ್ ನ ಹುಲಿದೇವರ ಬನದ ದೀಪಕ್ ಆರ್. ಸಾಗರ್ ಹಾಗೂ ಸಂಗಡಿಗರು ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜಲಿ ಯೋಜನೆ ಕುರಿತು ಯಕ್ಷಗಾನ ವೇಷ ಧರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಪ್ರಕೃತಿದತ್ತವಾಗಿ ದೊರೆಯುವ ಸೂರ್ಯನ ಕಿರಣಗಳ ಮೂಲಕ ಸೌರಶಕ್ತಿ ಯಿಂದ ವಿದ್ಯುತ್ ಉತ್ಪಾದನೆ ಮಾಡಿ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿಬಹುದು. 1ಕಿಲೋವ್ಯಾಟ್ ಗೆ 60 ಸಾವಿರ ರೂ, 3 ಕಿಲೋವ್ಯಾಟ್ ಗೆ 78 ಸಾವಿರ ರೂ. ಸಹಾಯಧನ ದೊರೆಯುತ್ತದೆ. ಸ್ವಂತ ಮನೆ ಇರುವ ಎಲ್ಲಾ ವರ್ಗದ ಜನರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.
ಈ ಕಾರ್ಯಕ್ರಮದಲ್ಲಿ ಹಿರಿಯೂರಿನ ಬೆಸ್ಕಾಂ ಅಧಿಕಾರಿಗಳು ಮತ್ತು ಪವರ್ ಮ್ಯಾನ್ ಗಳು, ಪಿ.ಎಂ.ಸೂರ್ಯಘರ್ ಯೋಜನಾ ಸಂಯೋಜಕಿ ಮಹಿಮಾ ಪಾಲ್ಗೊಂಡಿದ್ದರು.
ನ್ಯಾಯಾವಾದಿ ದೀಪಕ್, ಆರ್.ಸಾಗರ್, ಕಿರುತೆರೆ ನಟಿ ಆಶಾ ಶಶಿಧರ ಕಬಾಡಿ, ಶರಣ್, ಸುಂದರ್ ರಾಜ್, ಕಿರಣ್ ಪೂಜಾರಿ, ಮಲ್ಲಿಕಾರ್ಜುನ್ ಎಂ. ಆರ್ಯ ಬೀದಿ ನಾಟಕ ಪ್ರದರ್ಶಿಸಿದರು.
