
ಹಿರಿಯೂರು:
ದೇಶಭಕ್ತ ಸಂಘಟನೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಸಂಘಟನೆಯನ್ನು ನಿಷೇಧ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡೆ ನಿಜಕ್ಕೂ ಖಂಡನೀಯ ಎಂಬುದಾಗಿ ತಾಲ್ಲೂಕು ಬಿ.ಜೆ.ಪಿ. ಮಂಡಲ ಅಧ್ಯಕ್ಷರಾದ ಕೆ.ಅಭಿನಂದನ್ ಅವರು ಹೇಳಿದರು.
ಸಚಿವರು ಭಾರತದಲ್ಲಿದ್ದಾರೋ ಅಥವಾ ಪಾಕಿಸ್ತಾನದಲ್ಲಿದ್ದಾರೋ ಗೊತ್ತಿಲ್ಲ. ಅವರು ದೇಶದ ಇತಿಹಾಸ, ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇದೆ ಸರ್ಕಾರಿಸ್ಥಳ, ಮುಜುರಾಯಿ ದೇವಸ್ಥಾನಗಳಲ್ಲಿ ಆರ್.ಎಸ್.ಎಸ್ ನ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಧೋರಣೆ ಸರಿಯಲ್ಲ. ಎಂದಿದ್ದಾರಲ್ಲದೆ,
ಮಕ್ಕಳಿಗೆ ದೇಶಪ್ರೇಮ, ರಾಷ್ಟ್ರಭಕ್ತಿಯ ಸಂಸ್ಕಾವನ್ನು ಕಲಿಸುವುದು ಅಪರಾಧವೇ? ಭಾರತ್ ಮಾತಾಕಿ ಜೈ ಅಂದರೆ ಅದು ಅಪರಾಧವೇ ? ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಯಾಕೆ ನಿಷೇಧಿಸಬೇಕು ಎಂಬುದಾಗಿ ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ದರೆ ಅಲ್ಲಲ್ಲಿ ನಾಯಿ ಕೊಡೆಗಳಂತೆ ಹಬ್ಬಿಕೊಳ್ಳುತ್ತಿರುವ ಮದರಸಾಗಳನ್ನು ನಿಷೇಧಿಸಲಿ. ವಿಧಾನಸೌಧದ ಮೊಗಸಾಲೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದಾಗ ನಿಮಗೆ ಕೇಳಿಸಲಿಲ್ಲವೇ?
ನಿಮ್ಮ ಕಲುಬುರ್ಗಿ ಜಿಲ್ಲೆಯಲ್ಲಿ ಮತಾಂಧರು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಾಣಿತ್ತಿಲ್ಲವೇ, ಮೊದಲು ನಿಮ್ಮ ಜಿಲ್ಲೆಯಲ್ಲಿರುವ ದೇಶದ್ರೋಹಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂಬುದಾಗಿ ಅವರು ಆಗ್ರಹಿಸಿದ್ದಾರೆ.
ನೀವು ಯಾವುದೇ ಕಾರಣಕ್ಕೂ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಗಳಲ್ಲೂ ಆರ್.ಎಸ್ ಎಸ್.ಪಥಸಂಚಲನ ನಡೆಯುತ್ತದೆ. ನಿಮಗೆ ತಾಕತ್ತಿದ್ದರೆ ತಡೆಯಿರಿ ನೋಡೋಣ ಎಂಬುದಾಗಿ ಅವರು ಸವಾಲೆಸೆದಿದ್ದಾರೆ.

