
ಹಿರಿಯೂರು :
ಹಿರಿಯ ನಾಗರೀಕರು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು, ಪೌಷ್ಠಿಕ ಆಹಾರ ಸೇವನೆ, ಸರಿಯಾದ ಸಮಯಕ್ಕೆ ವಿಶ್ರಾಂತಿ ಪಡೆಯುವ ಮೂಲಕ ಕಾಯಿಲೆಗಳು ಬರದಂತೆ ಎಚ್ಚರಿಕೆ ವಹಿಸಬೇಕು ಎಂಬುದಾಗಿ ಚಿತ್ರದುರ್ಗ ಆಯುಷ್ ಇಲಾಖೆ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಎಸ್.ಚಂದ್ರಕಾಂತ್ ನಾಗಸಮುದ್ರ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ “ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಹಿರಿಯ ನಾಗರೀಕರಿಗೆ ಯೋಗಕ್ಷೇಮ ಚಟುವಟಿಕೆಗಳ ಕಾರ್ಯಕ್ರಮ” ಎಂಬ ಬೃಹತ್ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.
ಸಹಾಯಕ ಕಾನೂನು ನೆರವು ಅಭಿರಕ್ಷಕರಾದ ಶ್ರೀಮತಿ ಕೆ.ಆರ್.ಸೌಮ್ಯ ಮಾತನಾಡಿ, ಹಿರಿಯರು ಮಕ್ಕಳೊಂದಿಗೆ ಸೌಜನ್ಯತವಾಗಿ ಬದುಕು ಸಾಗಿಸಿ, ಮಕ್ಕಳ ವಿಷಯದಲ್ಲಿ ತಂದೆ ತಾಯಿ ಒಳ್ಳೆಯವರಾಗಿರುತ್ತಾರೆ ಮಕ್ಕಳು ಒಡೆದರು ಬೈದರು ಯಾರಿಗೂ ಹೇಳುವುದಿಲ್ಲಾ ಯಾವತ್ತೂ ಅವರು ಮಕ್ಕಳಿಗೆ ಕೆಟ್ಟದು ಬಯಸುವುದಿಲ್ಲ ಪೋಷಣೆ ಮಾಡಬೇಕಾದುದ್ದು ಮಕ್ಕಳ ಕೆಲಸ ಮಾಡದೇ ಹೋದರೆ ಕಾನೂನು ನಿಮ್ಮ ಬೆಂಬಲಕ್ಕೆ ಬರುತ್ತದೆ ಎಂದು ಹೇಳಿದರು.
ಹಿರಿಯರ ಆರ್ಶಿವಾದಕ್ಕಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ, ಹಿರಿಯರ ಸುರಕ್ಷತೆ ಕಾಪಾಡುವ ಮಾನವೀಯತೆ ಬೆಳೆಸಿಕೊಳ್ಳಬೇಕು, ನಮ್ಮ ಹಿರಿಯರ ಅನುಭವ ಯಾವ ಪುಸ್ತಕದಿಂದಲೂ ಪಡೆಯಲು ಸಾಧ್ಯವಿಲ್ಲ ಹಿರಿಯರು ನಿಯಮಿತವಾಗಿ ಆಹಾರ ನೀರು ಸೇವಿಸುವುದರೊಂದಿಗೆ ಆರೋಗ್ಯ ಕಾಪಾಡಿಕೊಳ್ಳಬೇಕು, ಹಿರಿಯ ನಾಗರೀಕರನ್ನು ಮಕ್ಕಳು ಪೋಷಣೆ ಮಾಡಿದರೆ ನಾಳೆ ನಮ್ಮ ಮಕ್ಕಳು ನಮ್ಮನು ಪೋಷಣೆ ಮಾಡುತ್ತಾರೆ ಎಂಬ ಅರಿವು ಇಂದಿನ ಮಕ್ಕಳಲ್ಲಿ ಇರಬೇಕು ಎಂದರು.
ತಜ್ಞ ವೈದ್ಯರಾದ ಡಾ.ಚಂಪಾ ರವರು ಮಾತನಾಡಿ, ಹಿರಿಯರು ದೈಹಿಕವಾಗಿ, ಮಾನಸಿಕವಾಗಿ ಆದ್ಯಾತ್ಮಿಕವಾಗಿ ಸಾಮಾಜಿಕವಾಗಿ ಸಾಮರಸ್ಯ ಹೊಂದಿದ್ದರೆ ಮಾತ್ರ ಅರೋಗ್ಯವಾಗಿರಬಹುದು. ಮನಸ್ಸಿಗೂ,ದೇಹಕ್ಕೂ ತುಂಬಾ ಅವಿನಾಭಾವ ಸಂಬಂಧವಿದ್ದು, ಮಾನಸಿಕ ಕಾಯಿಲೆ ಇದ್ದರೆ ದೇಹ ಅನಾರೋಗ್ಯಕ್ಕೆ ಒಳಗಾಗುತ್ತದೆ. ದೇಹಕ್ಕೆ ಯಾವುದೇ ಕಾಯಿಲೆ ಬಂದರು ಮನಸ್ಸು ಮಾನಸಿಕ ಕಾಯಿಲೆಗೆ ತುತ್ತಾಗುತ್ತದೆ.
ಅಲ್ಲದೆ ಮನಸ್ಸು ದೇಹ ಒಂದೇ ನಾಣ್ಯದ ಎರಡು ಮುಖಗಳಿದಂತೆ. ಆಲೋಚನೆಗಳು, ಭಾವನೆಗಳು ದೈಹಿಕವಾಗಿ ಚಟುವಟಿಕೆ, ನಡವಳಿಕೆ ಮೇಲೆ ಮಾನಸಿಕ ಆರೋಗ್ಯ ವನ್ನು ಗುರುತಿಸಬಹುದು ಮನಸ್ಸು ಪ್ರತಿಯೊಬ್ಬರಲ್ಲಿಯೂ ಒಂದೇ ತರಹ ಇರುವುದಿಲ್ಲ ಅವರವರ ಭಾವನೆ, ಆಲೋಚನೆ,ಅನುಗುಣವಾಗಿ ವಂಶಪಾರ್ಯವಾಗ, ತಾಯಿ ಗರ್ಭಿಣಿ ಇದ್ದಾಗ ಅವರಿಗೆ ಬೇರೆ ರೀತಿಯಲ್ಲಿ ತೊಂದರೆಯಾದಾಗ ಮಾನಸಿಕ ಕಾಯಿಲೆ ಬರಬಹುದು.
ಹಿರಿಯರಲ್ಲಿ ಅರೋಗ್ಯ ಸಮಸ್ಯೆಗಳು ಇತರೆ ಸಮಸ್ಯೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಬಹುದು ಮನಸಿಕವಾಗಿ ಅಲ್ಪತರ ತೀವ್ರತರ ಎಂದು ಎರಡು ಸ್ವರೂಪದಲ್ಲಿ ಮಾನಸಿಕ ಕಾಯಿಲೆಗಳು ಬರುತ್ತವೆ, ಉಸಿರಾಟದ ಸಮಸ್ಯೆ ಇರುವವರು ಪ್ರಾಣಾಯಾಮ ಮಾಡಬೇಕು, ಯೋಗದಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದು ತಿಳಿಸಿದರು.
ಯೋಗತರಬೇತುದಾರ ತಿಪ್ಪೇಸ್ವಾಮಿ ಮಾತನಾಡಿ, ಯೋಗ ಮತ್ತು ಪ್ರಾಣಾಯಾಮ ಆರೋಗ್ಯಕ್ಕೆ ತುಂಬಾ ಅತೀ ಮುಖ್ಯವಾಗಿದೆ. ಯೋಗಾಭ್ಯಾಸದಿಂದ ಹಲುವು ರೋಗ ಬರುವುದನ್ನು ತಡೆಯಬಹುದು. ಸಕ್ಕರೆ ಖಾಯಿಲೆಯನ್ನು ಯೋಗದಿಂದ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಹಿರಿಯರಲ್ಲಿ ರೋಗ ನಿರೋದಕ ಶಕ್ತಿ ಕಡಿಮೆಯಾಗಿರುತ್ತದೆ, ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕು ಎಂದರು.
ಶ್ರೀಯುತ ಡಾ.ರಾಘವೇಂದ್ರರವರು ಪೌಷ್ಟಿಕ ಆಹಾರ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿಗಳು ಶ್ರೀಮತಿ ಜೆ.ವೈಶಾಲಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸುಧೀರ್ ಪಟಕೆ. ರಾಜ್ಯ ಸರ್ಕಾರಿ ನಿವೃತ ನೌಕರರ ಸಂಘದ ಅಧ್ಯಕ್ಷರಾದ ಶ್ರೀಯುತ ಜೆ.ಏಕಾಂತಪ್ಪ, ಶ್ರೀಯುತ ನಾರಂನಾಯ್ಡು, ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು, ಹಿರಿಯನಾಗರೀಕರು ಹಾಜರಿದ್ದರು.
