October 29, 2026
003

ಹಿರಿಯೂರು :

ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಎನ್.ಡಿ.ಎ ಪಕ್ಷ ಗೆಲುವು ಸಾಧಿಸಲು ಹಗಲಿರುಳು ಶ್ರಮಿಸಿದ ಬಿಜೆಪಿ ಮತ್ತು ಜೆಡಿಎಸ್‌ನ ಎಲ್ಲಾ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಎನ್.ಡಿ.ಎ ಅಭ್ಯರ್ಥಿ ಕೆ.ಎಂ.ಸುರೇಶ್ ರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇದು ಕೇವಲ ಒಬ್ಬ ಅಭ್ಯರ್ಥಿಯ ಗೆಲುವಲ್ಲ; ಮೈತ್ರಿಯ ಒಗ್ಗಟ್ಟು, ಕಾರ್ಯಕರ್ತರ ಪರಿಶ್ರಮ ಮತ್ತು ಸಂಘಟಿತ ಪ್ರಯತ್ನದ ಪ್ರತಿಫಲ. ಇದು ಬಿಜೆಪಿ ಮತ್ತು ಜೆಡಿಎಸ್‌ನ ಪ್ರತಿಯೊಬ್ಬ ಕಾರ್ಯಕರ್ತನ ಗೆಲುವು, ಈ ಫಲಿತಾಂಶವು ಮೈತ್ರಿಕೂಟದ ಸಂಘಟಿತ ಶಕ್ತಿಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ ಎಂಬುದಾಗಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ವಿರುದ್ಧದ ಚುನಾವಣಾ ಸ್ಪರ್ಧೆಯಲ್ಲಿ ನಾನು ಗೆಲುವು ಸಾಧಿಸಲು ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಈ ವಿಜಯವನ್ನು ಸಮರ್ಪಿಸುತ್ತೇವೆ. ನಿಮ್ಮ ಪರಿಶ್ರಮ, ಬದ್ಧತೆ ಮತ್ತು ಒಗ್ಗಟ್ಟಿಗೆ ನನ್ನ ಅಭಿನಂದನೆಗಳು ಎಂಬುದಾಗಿ ಎನ್.ಡಿ.ಎ ಅಭ್ಯರ್ಥಿ ಕೆ.ಎಂ.ಸುರೇಶ್ ರವರು ಕಾರ್ಯಕರ್ತರನ್ನು ಪ್ರಶಂಸಿಸಿದ್ದಾರೆ.

About The Author

Leave a Reply

Your email address will not be published. Required fields are marked *