
ಹಿರಿಯೂರು :
ಕಳೆದ ಜೂನ್ 30 ರಿಂದ ಆಗಸ್ಟ್ 8ರವರೆಗೆ ತಾಲೂಕಿನ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಗಣತಿ ನಡೆಸಿದ್ದಾರೆ, ಪರಿಸ್ಕರಣೆಯ ವೇಳೆ ಮೃತಪಟ್ಟ ಹಾಗೂ ವರ್ಗಾವಣೆಗೊಂಡ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿ ನೂತನ ಯುವ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ ಎಂಬುದಾಗಿ ಮತದಾರರ ನೋಂದಣಾಧಿಕಾರಿ ಎ.ಬಿ.ವಿಜಯಕುಮಾರ್ ತಿಳಿಸಿದರು.
ಹಿರಿಯೂರು ತಾಲೂಕು ಕಚೇರಿಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ 2026ರ ಅನ್ವಯ ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿ, ನಂತರ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಮಹಿಳಾ ಮತದಾರರು 1,11,749 ಪುರುಷ ಮತದಾರರು 1,14,275 ಇತರೆ ಮತದಾರರು 10 2,26,034 ಒಟ್ಟು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ಚುನಾವಣಾ ಶಿರಸ್ತೇದಾರರಾದ ಅರುಣ ಕುಮಾರಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜ್ಞಾನೇಶ್, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಗೋವಿಂದಪ್ಪ ಎಐ ಬಿ.ಎಸ್.ಪಿ ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗಪ್ಪ, ಜೆಡಿಎಸ್ ಮುಖಂಡ ಭರತೇಶ್ ಹಾಗೂ ಪಕ್ಷದ ಮುಖಂಡರಾದ ಕಿರಣ್, ರಮೇಶ್ ಇತರರು ಉಪಸ್ಥಿತರಿದ್ದರು.
