
ಹಿರಿಯೂರು:
ತಾಲ್ಲೂಕಿನ ಕೂನಿಕೆರೆ ಗ್ರಾಮದ ನಾಮಫಲಕವು ಬಿದ್ದು ಹೋಗಿದ್ದು, ಗ್ರಾಮವನ್ನು ಗುರುತಿಸಲು ಕೂನಿಕೆರೆ ಗ್ರಾಮಕ್ಕೆ ಹೊಸ ನಾಮಫಲಕವನ್ನು ಹಾಕಿಕೊಡಬೇಕು ಎಂಬುದಾಗಿ ಒತ್ತಾಯಿಸಿ, ಕೂನಿಕೆರೆ ಗ್ರಾಮದ ಕಲಾವಿದ ಮಾರುತೇಶ್ ರವರು ಗ್ರಾಮಸ್ಥರ ಪರವಾಗಿ ಲೋಕೋಪಯೋಗಿ ಇಲಾಖೆಗೆ ಮನವಿಯನ್ನು ಸಲ್ಲಿಸಿದ್ದಾರೆ.
ಕೂನಿಕೆರೆಗ್ರಾಮದ ಮೂಲಕವೇ ಜಿಲ್ಲೆಯ ಜೀವನಾಡಿ ಜಲಾಶಯವಾದ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹೋಗುವ ರಸ್ತೆಯಿದ್ದು, ಗ್ರಾಮ ಗುರುತಿನ ನಾಮಫಲಕ ಕಿತ್ತುಹೋಗಿರುವುದರಿಂದ ಜಲಾಶಯಕ್ಕೆ ಹೋಗುವ ಹೊಸ ಪ್ರಯಾಣಿಕರಿಗೆ ಗೊಂದಲವಾಗಲಿದೆ. ಆದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಶೀಘ್ರವಾಗಿ ಹೊಸ ನಾಮಫಲಕವನ್ನು ಅಳವಡಿಸಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

