
ಹಿರಿಯೂರು :
ಜೆಡಿಎಸ್ ರಾಜ್ಯಯುವಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರೇ ಹಿರಿಯೂರು ತಾಲೂಕು ಜೆಡಿಎಸ್ ಅಧ್ಯಕ್ಷರು ಯಾರೆಂಬುದನ್ನು ದೃಢಪಡಿಸಬೇಕು ಎಂಬುದಾಗಿ ಜೆಡಿಎಸ್ ರಾಜ್ಯ ಯುವ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದಾರೆ.
ನಗರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಕೆ.ಜಿ.ಹನುಮಂತರಾಯರವರು ಈ ಕುರಿತು ಮಾತನಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಬರಗಾಲದಲ್ಲಿ ರೈತರಿಗೆ ಯಾವುದೇ ಪರಿಹಾರಗಳನ್ನು ಕೊಡದೆ ಬಂಡತನದಿಂದ ನಡೆದುಕೊಳ್ಳುತ್ತಿದೆ ಅದರ ವೀಕ್ಷಣೆಗಾಗಿ ಆಗಮಿಸುತ್ತಿರುವ ಜೆಡಿಎಸ್ ರಾಜ್ಯ ಯುವ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರೇ ನಿರ್ಧರಿಸಬೇಕು ಎಂಬುದಾಗಿ ತಿಳಿಸಿದ್ದಾರೆ.
ಹಿರಿಯೂರು ತಾಲೂಕಿನಲ್ಲಿ ತಾಲೂಕು ಅಧ್ಯಕ್ಷರೆಂದು ರಂಗೇನಹಳ್ಳಿ ಶಂಕರ್ ಮೂರ್ತಿ ಮತ್ತು ಮಸ್ಕಲ್ ಎನ್. ಹನುಮಂತರಾಯ ಅವರಲ್ಲಿಯೇ ಮುಸುಕಿನ ಗುದ್ದಾಟ ನಡೆಯುತ್ತಿದೆ ತಾವುಗಳು ಬಂದು ದಯವಿಟ್ಟು ಅದನ್ನು ಬಗೆಹರಿಸಿ ಕೊಡಬೇಕು.
ಅಲ್ಲದೆ ಸಾಧ್ಯವಾದರೆ ಇಬ್ಬರನ್ನು ನಗರ ಮತ್ತು ಗ್ರಾಮೀಣ ಅಧ್ಯಕ್ಷರೆಂದು ನೇಮಿಸಿಕೊಳ್ಳಬೇಕಾಗಿ ತಿಳಿಸಿದರು. ತಾಲೂಕಿನ ರೈತರ ತೆಂಗು ಅಡಿಕೆ ಸೂರ್ಯಕಾಂತಿ ಶೇಂಗಾ ಒಣಗಿ ಹೋಗಿವೆ. ಇದರಿಂದ ರೈತರು ಗುಳೆ ಹೋಗಬೇಕಾಗುತ್ತದೆ. ತಾವುಗಳು ಇದನ್ನು ಖುದ್ದು ಪರಿಶೀಲಿಸಿ ಹೋರಾಟ ಮಾಡಿ ರೈತರಿಗೆ ಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದರು.
