June 13, 2026
0001

ಹಿರಿಯೂರು :

ಬಿ ಇ ಟಿ ಯುರೋ  ಇಂಟರ್ನ್ಯಾಷನಲ್ ಶಾಲೆಯಲ್ಲಿ ಶಾಲಾ ಮಟ್ಟದ 2026 -27ನೇ ಸಾಲಿನ ಮಕ್ಕಳ ಕ್ಯಾಬಿನೆಟ್ ರಚನೆಯನ್ನು ಸಂವಿಧಾನದ ಮತದಾನದ ಮಾದರಿಯಲ್ಲಿ ಮಕ್ಕಳಿಂದ ಮತದಾನ ಮಾಡಿಸುವ ಮುಖಾಂತರ ಚುನಾವಣೆಯನ್ನು ನಡೆಸಲಾಗಿದೆ ಎಂಬುದಾಗಿ ಶಾಲೆಯ ಅಧ್ಯಕ್ಷರಾದ ಘನಶಂಕರ್ ಹೇಳಿದರು.

ಬಿ ಇ ಟಿ ಯುರೋ  ಇಂಟರ್ನ್ಯಾಷನಲ್ ಶಾಲೆಯಲ್ಲಿ ಶಾಲಾ ಮಟ್ಟದ 2026 -27ನೇ ಸಾಲಿನ ಮಕ್ಕಳ ಕ್ಯಾಬಿನೆಟ್ ರಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚುನಾಯಿತಗೊಂಡ ವಿದ್ಯಾರ್ಥಿಗಳಿಗೆ 2026-27 ನೇ ಶೈಕ್ಷಣಿಕ ವರ್ಷದ ವಿವಿಧ ಖಾತೆಗಳನ್ನು ಹಂಚಿಕೆ ಮಾಡಲಾಯಿತು. ಮುಖ್ಯಮಂತ್ರಿಯಾಗಿ ಮೋಹಿತ್ ಶ್ರೀವತ್ಸ,  ಉಪಮುಖ್ಯಮಂತ್ರಿಯಾಗಿ ಇಂಪನ ಡಿ, ಕ್ರೀಡಾ ಮಂತ್ರಿಯಾಗಿ ಕುಶಾoದ್ ಪವರ್, ಹೆಣ್ಣು ಮಕ್ಕಳ ಹಿತರಕ್ಷಣೆ ಹಾಗೂಹಣಕಾಸುಮಂತ್ರಿಯಾಗಿ ಸ್ನೇಹ ಜಿ.ಆರ್, ಆರೋಗ್ಯ ಮಂತ್ರಿಯಾಗಿ ಹರ್ಷ ವಿ.ಪಿ, ಶಿಕ್ಷಣ ಮಂತ್ರಿಯಾಗಿ  ಗೌರವ ಎಸ್.ಎಂ., ಕಲಾ ಮತ್ತು ರಕ್ಷಣಾ ಮಂತ್ರಿಯಾಗಿ ನಿಸರ್ಗ ಮಾಣಿಕ್ಯ ಜಿ , ಪರಿಸರ ಮಂತ್ರಿಯಾಗಿ ಹೃತ್ವಿಕ್  ಸಿ.ಎಂ ಚುನಾಯಿತಗೊಂಡಿದ್ದಾರೆ. 

ಈ ಸಂದರ್ಭದಲ್ಲಿ ಖಾತೆಯ ಚುನಾಯಿತ ವಿದ್ಯಾರ್ಥಿಗಳೆಲ್ಲರೂ ಪೋಷಕರು, ಶಿಕ್ಷಕಿಯರು ಹಾಗೂ ಶಾಲಾವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರಮಾಣ ಸ್ವೀಕರಿಸುವ ಮುಖಾಂತರ ಅಧಿಕಾರ ಸ್ವೀಕರಿಸಿದರು.   ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕಿಯರು, ಶಾಲಾ ಆಡಳಿತ ಮಂಡಳಿ, ಪೋಷಕರು  ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *