June 13, 2026
000002

ಹಿರಿಯೂರು :     

ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕ, ಅಹಿಂದಶಕ್ತಿ, ಅಲ್ಪಸಂಖ್ಯಾತರ ಪ್ರಶ್ನಾತೀತ ನಾಯಕರಾದ ಡಿ.ಜೆಡ್. ಜಮೀರ್ ಅಹ್ಮದ್ ಖಾನ್ ರವರಿಗೆ 2ನೇ ಪಟ್ಟಿಯ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಮಾಡಬೇಕು ಎಂಬುದಾಗಿ ಜಾಮಿಯಾ ಮಸೀದಿ ಅಧ್ಯಕ್ಷರಾದ ಸೈಯದ್ ಮುನಿರ್ ಮುಲ್ಲಾ ಒತ್ತಾಯಿಸಿದರು.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸರ್ಕಲ್ ಬಳಿ ಮುಸ್ಲಿಂ ಹಕ್ಕುಗಳ ವೇದಿಕೆ ಹಿರಿಯೂರು ಇವರ ನೇತೃತ್ವದಲ್ಲಿ ಹಿರಿಯೂರಿನ ಮುಸಲ್ಮಾನ್ ಬಾಂಧವರು ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಈ ಪ್ರತಿಭಟನೆಯಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷರಾದ ಸೈಯದ್ ಮುನಿರ್ ಮುಲ್ಲಾ, ಸದಸ್ಯರಾದ ರಾಮಪುಲ್ಲ, ಮಹಮ್ಮದ್ ಅಬ್ಬಾಸ್ಸೈಯದ್ ಸಾಲಾವುದ್ದಿನ್, ಅಜೀಜ್, ಸಾಧತ್ ಉಲ್ಲ, ಅಭಿದ್ ಹುಸೇನ್, ದಾದಾಪೀರ್, ಶರೀಫಜನ್, ಸೇರಿದಂತೆ ಅನೇಕ ಮುಸ್ಲಿಂ ಮುಖಂಡರುಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *