
ಹಿರಿಯೂರು :
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬೇರೆ ಬೇರೆ ಕಡೆಗಳಲ್ಲಿ ಮಾಡುವುದರಿಂದ ಕನ್ನಡವನ್ನು ಹಲವೆಡೆ ಪಸರಿಸಿದಂತಾಗುತ್ತದೆ, ಜೊತೆಗೆ ಭಾಷೆಯ ಬಗೆಗಿನ ಒಲವು ವಿಸ್ತಾರವಾಗುತ್ತದೆ ಎಂಬುದಾಗಿ ಸಿ.ಎಸ್.ಐ.ಆರ್ ಹಿರಿಯ ತಾಂತ್ರಿಕ ಅಧಿಕಾರಿ ಎಂ.ಮಂಜಣ್ಣ ಹೇಳಿದರು.
ನಗರದ ವಿಶ್ವಕನ್ನಡ ಕಲಾಸಂಸ್ಥೆ ವತಿಯಿಂದ ಲಕ್ಷ ದ್ವೀಪದ ಅಗಟ್ಟಿಯ ದ್ವೀಪದಲ್ಲಿ ಆರು ದಿನಗಳ ಕಾಲ ನಡೆಸಲಾದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.
ವಿಶ್ವ ಕನ್ನಡ ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಈ.ರವೀಶ್ ಅಕ್ಕರ ಮಾತನಾಡಿ, ಕನ್ನಡ ಭಾಷೆಯ ಸೊಗಡು ವಿಭಿನ್ನ ಸಂಸ್ಕೃತಿಯ ನೆಲೆಗಳಲ್ಲಿ ಪರಿಚಯಿಸುವ ಉದ್ದೇಶ ನಮ್ಮದು, ಎಲ್ಲರ ಸ್ನೇಹ ಮತ್ತು ಸಹಕಾರದಿಂದ ಇಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಕನ್ನಡ ಸೇವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ತ್ಯಾಗರಾಜ್, ಬಿ.ಟಿ.ಸವಿತಾ, ಆರ್.ಗಗನಚಂದ್ರ, ಬಿ.ಎಸ್.ಪಾರ್ವತಮ್ಮ, ವಿಜಯಕಲಾ, ಜೆ.ಮಂಜುನಾಥ್, ನಂದೀಶ್ವರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
