
ಹಿರಿಯೂರು :
ಶ್ರೀಮತಿಗಂಗಾಅಮೃತೇಶ್ವರಸ್ವಾಮಿಯವರ ಪುತ್ರಿಯಾದ ಕುಮಾರಿ ಎ.ಎಂ.ಅನನ್ಯ ರವರು ನಗರದ ರಾಷ್ಟ್ರೀಯ ಅಕಾಡೆಮಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿದ್ದು, ಎಪ್ರಿಲ್ 23 ರಂದು 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ವಿದ್ಯಾರ್ಥಿನಿ ಎಲ್ಲಾ ವಿಷಯದಲ್ಲೂ ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದರೆ, ವಿಜ್ಞಾನ ವಿಷಯದಲ್ಲಿ ಮಾತ್ರ ಕೇವಲ 25 ಅಂಕಗಳನ್ನು ಫಲಿತಾಂಶ ಪಟ್ಟಿಯಲ್ಲಿ ಪ್ರಕಟಿಸಲಾಗಿತ್ತು.
ಈ ಫಲಿತಾಂಶದ ಬಗ್ಗೆ ಅನುಮಾನಿಸಿದ ಕುಮಾರಿ ಅನನ್ಯ ಪೋಷಕರು, ಎಲ್ಲೋ ವ್ಯತ್ಯಾಸವಾಗಿದೆ ಎಂದು ಉತ್ತರ ಪತ್ರಿಕೆಯನ್ನು ತರಿಸಿ ನೋಡಿದಾಗ ಮೌಲ್ಯಮಾಪಕರು ವಿಜ್ಞಾನ ವಿಷಯದಲ್ಲಿ 71 ಅಂಕಗಳನ್ನು ನೀಡಿರುವುದನ್ನು ಗಮನಿಸಲಾಯಿತು, ಇಂತಹ ಘಟನೆಗಳಿಂದ ವಿದ್ಯಾರ್ಥಿಗಳ ಮಾನಸಿಕ ಮಟ್ಟ ಕುಸಿಯುವ ಸಂಭವವಿದ್ದು, ಕರ್ನಾಟಕ ಪರೀಕ್ಷಾ ಮಂಡಳಿ ಇದಕ್ಕೆ ನೇರ ಹೊಣೆಯಾಗಬೇಕಾಗುತ್ತದೆ.
ಆದ್ದರಿಂದ ಇನ್ನು ಮುಂದಾದರೂ ಪರೀಕ್ಷಾ ಮಂಡಳಿಯವರು ಇಂತಹ ವ್ಯತ್ಯಾಸಗಳನ್ನು ಮಾಡುವ ಮೂಲಕ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರದಂತೆ, ಪರೀಕ್ಷೆಯ ಫಲಿತಾಂಶ ಪ್ರಕಟಣೆ ಮಾಡುವಾಗ ಮತ್ತೊಮ್ಮೆ ಈ ರೀತಿಯ ತಪ್ಪುಗಳಾಗದಂತೆ ಪರಿಶೀಲಿಸಿ, ಯಾವ ಮಗುವಿಗೂ ಅನ್ಯಾಯ ಆಗದಂತೆ ಎಚ್ಚರ ವಹಿಸಬೇಕು ಎಂಬುದಾಗಿ ಶ್ರೀಮತಿಗಂಗಾಅಮೃತೇಶ್ವರಸ್ವಾಮಿಯವರು ಪರೀಕ್ಷಾ ಮಂಡಳಿಗೆ ಮನವಿ ಮಾಡಿದ್ದಾರೆ.
