April 21, 2026
0005

ಹಿರಿಯೂರು :       

ಸಾರ್ವಕಾಲಿಕವಾಗಿ ಸಮಾಜಕ್ಕೆ ಮಾದರಿಯಾಗುವ, ಜನಸಾಮಾನ್ಯರಿಗೂ ಕೂಡ ಅರ್ಥವಾಗುವಂತಹ ಕನ್ನಡ ವಚನಗಳನ್ನು ನೀಡಿದ ಮಹಾನುಭಾವ ಬಸವಣ್ಣನವರು ಸಮಾನತೆಯ ಹರಿಕಾರರಾಗಿ, ಸ್ತ್ರೀಕುಲದ ಏಳಿಗೆಗಾಗಿ ಶಿಕ್ಷಣವೇ ಸಮಾನತೆ ಸಾಧಿಸಲು ಮಾರ್ಗ ಎಂದು ಪ್ರತಿಪಾದಿಸಿದರು ಎಂಬುದಾಗಿ ಸರ್ಕಾರಿ ನೌಕರರ ಸ೦ಘದ ಮಾಜಿ ಅಧ್ಯಕ್ಷರಾದ ಕೆ.ಜಿ.ಹನುಮಂತರಾಯ ಹೇಳಿದರು.

ತಾಲ್ಲೂಕಿನ ಕೂನಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಅವರು ಮಾತನಾಡಿದ ಅವರು ಕಾಯಕವೇ ಕೈಲಾಸ ಎಂದು ಹೇಳುವ ಮೂಲಕ ಕಾಯಕಯೋಗಿಗಳಿಗೆ ಎತ್ತರದ ಸ್ಥಾನ ನೀಡಿದ ಬಸವಣ್ಣನವರ ಆದರ್ಶಗಳನ್ನು ಎಲ್ಲ ಜಾತಿ ಜನಾಂಗದವರು ಪಾಲಿಸಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬಿಲ್ ಕಲೆಕ್ಟರ್ ರವಿ, ಕೆರೆಕೋಡಿಹಟ್ಟಿರಾಮಯ್ಯ, ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿರೇಖಾ. ಗ್ರಾಮ ಪಂಚಾಯಿತಿ ನೌಕರರಾದ ಶ್ರೀಮತಿ ಲತಾ, ಶ್ರೀವಲ್ಲಿ, ಶ್ರೀಗಜೇಂದ್ರ, ಮಂಜುನಾಥ ಸಂಘದ ಶ್ರೀಮತಿ ವರಲಕ್ಷಿ, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಯೋಗೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *