April 11, 2026
00003

ಹಿರಿಯೂರು :

ಸಂಗೀತವು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು,  ಸಂಗೀತಕ್ಕೆ ಯಾವುದೇ ತಾಳ ಹಾಗೂ ರಾಗಗಳು ಇರಲಿಲ್ಲ, ಸಂಗೀತಕ್ಕೆ ತಾಳ ಹಾಗೂ ರಾಗವನ್ನು ಕೊಟ್ಟವರು ಮಾತಂಗಮಹರ್ಷಿಗಳು, ಮೊದಲ ಬಾರಿಗೆ ಸಂಗೀತಕ್ಕೆ ಹೊಸ ರಾಗ ಹೊಸ ತಾಳ  ನೀಡಿದಂತಹ ಕೀರ್ತಿ ಮಹರ್ಷಿ ಮಾತಂಗ ಮುನಿಯವರಿಗೆ ಸಲ್ಲುತ್ತದೆ ಎಂಬುದಾಗಿ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಸಕ್ಕರರಂಗಸ್ವಾಮಿ ಹೇಳಿದರು.

ನಗರದ ರೋಟರಿ ಕೃಷ್ಣಪ್ಪ ಸಭಾಭವನದಲ್ಲಿ ಶ್ರೀಏಕನಾಥೇಶ್ವರಿ ಸಂಗೀತ ವಿದ್ಯಾಲಯ ಹಿರಿಯೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಇವರ ಸಹಯೋಗದಲ್ಲಿ ಶ್ರೀಪುರಂದರದಾಸರು, ಶ್ರೀಕನಕದಾಸರು, ಹಾಗೂ ತ್ಯಾಗರಾಜ ಮಹಾಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ಜಿಲ್ಲಾಮಟ್ಟದ ಸಂಗೀತೋತ್ಸವ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಸಂಗೀತಕ್ಕೆ ಮೊದಲು ಯಾವುದೇ ರಾಗ ತಾಳ ಇರಲಿಲ್ಲ, ಎಂಟನೇ ಶತಮಾನದಲ್ಲಿ ಬದುಕಿದ್ದ ಮಹರ್ಷಿ ಮಾತಂಗ ಮುನಿಗಳು ಸಂಗೀತಕ್ಕೆ ಹೊಸ ರಾಗ ಹೊಸ ತಾಳ ಆಧರಿಸಿ ಇಂದು ಹಿಂದುಸ್ತಾನಿ ಸಂಗೀತ ,ಕರ್ನಾಟಕ ಸಂಗೀತ,ಪಶ್ಚಿಮಾತ್ಯ ಸಂಗೀತ ,ರೂಪುಗೊಂಡಿದೆ ಆದಕಾರಣ ಮಹರ್ಷಿ ಮಾತಂಗಮನಿಯವರನ್ನು ಸಂಗೀತದ ಪಿತಾಮಹ ಎಂದು ಕರೆಯಲಾಗುತ್ತಿದ್ದು ಸಂಗೀತಕ್ಕೆ ಮಹರ್ಷಿ ಮಾತಂಗಮುನಿಯವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತರು ಹಾಗೂ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಆಲೂರು ಹನುಮಂತರಾಯಪ್ಪನವರು ಮಾತನಾಡಿ, ಸಂಗೀತವು ಮನಸ್ಸಿಗೆ ಮನಸ್ಸಿಗೆ ಮುದವನ್ನು ನೀಡುವ ಜೊತೆಗೆ ಜೀವನಕ್ಕೆ ಉಲ್ಲಾಸವನ್ನು ತಂದು ಕೊಡುತ್ತದೆ, ಸಂಗೀತದಿಂದ ಹಲವು ಕಾಯಿಲೆಗಳನ್ನು ಗುಣಪಡಿಸಬಹುದು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ, ನಮ್ಮ ಬದುಕಿನ ಅದೆಷ್ಟೋ ಸಮಸ್ಯೆಗಳನ್ನು, ನೋವುಗಳನ್ನು ಮರೆತು ಸಂಗೀತದಿಂದ ಆನಂದದ ಕ್ಷಣಗಳನ್ನು ಆಶ್ವಾದಿಸಬಹುದಾಗಿದೆ ಎಂಬುದಾಗಿ ಅವರು ಹೇಳಿದರು.

ರೆಡ್ ಕ್ರಾಸ್ ಛೇರ್ಮನ್ ಹೆಚ್.ಎಸ್.ಸುಂದರ್ ರಾಜ್ ರವರು ಮಾತನಾಡಿ, ಸಂಗೀತವು ಪ್ರತಿಯೊಬ್ಬರನ್ನೂ ತನ್ನಡೆಗೆ ಸೆಳೆಯಬಲ್ಲ ಶಕ್ತಿ ಹೊಂದಿದ್ದು, ನೊಂದ ಮನಸ್ಸುಗಳನ್ನು ಅರಳಿಸುವ ಶಕ್ತಿ ಸಂಗೀತಕ್ಕಿದೆ, ಇಂತಹ ಸಂಗೀತ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ನಡೆಸುವ ಮೂಲಕ ಜನರ ಮನಸ್ಸನ್ನು ಸದಾ ಸಂತಸದಿಂದ  ಇರುವಂತೆ ಮಾಡುವ ಜೊತೆಗೆ ಯುವಪ್ರತಿಭೆಗಳನ್ನು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹಿಸಬಹುದು ಎಂಬುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಏಕನಾಥೇಶ್ವರಿ ಸಂಗೀತ ವಿದ್ಯಾಲಯದ ಪ್ರಾಂಶುಪಾಲರಾದ  ಸಂಗೀತ ವಿದ್ವಾನ್ ಆರ್.ತಿಪ್ಪೇಸ್ವಾಮಿ ಮಾತನಾಡಿ, ಒತ್ತಡ ಮುಕ್ತ ಬದುಕಿಗೆ ಸಂಗೀತ ಸಹಕಾರಿಯಾಗಿದ್ದು, ಮನಸ್ಸನ್ನು ಹಗುರಗೊಳಿಸಿ ಹತೋಟಿಯಲ್ಲಿಡಲು  ಸಂಗೀತ  ಪ್ರೇರಣೆ ನೀಡುತ್ತದೆ ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಸ್ತು ಸಂಯಮ ಕಲಿಸಿ ಭಾವೈಕ್ಯತೆ ಬೆಳೆಸಲು ಸಂಗೀತ ಸ್ಪೂರ್ತಿಯಾಗುತ್ತದೆ ಎಂಬುದಾಗಿ ಹೇಳಿದರು.

ಇದೇ ವೇಳೆ ಎನ್.ಜಗದಾಂಬ, ಟಿ.ಸುಲೋಚನ, ಶಶಿಪ್ರಕಾಶ್, ಶ್ರೀಮತಿ ರಮ, ಕವಿತಾ, ಎಚ್.ವೇದಪುಷ್ಪ, ಅಶ್ವಿನಿಸುರೇಂದ್ರ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಮಹಿಳಾ ಸಾಧಕರಾದ ಪಾರ್ವತಮ್ಮ. ಸೀತಮ್ಮ. ಬಿ. ಮಂಜುಳಾ. ಎಚ್. ಟಿ  ಸೌಮ್ಯ. ಎಂ.ವಿ. ನಾಗರತ್ನಮ್ಮ. ಎಂ. ಸಿದ್ದಗಂಗಮ್ಮ. ಎಚ್. ವೇದ ಪುಷ್ಪ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ  ರೋಟರಿ ಮಾಜಿ ಅಧ್ಯಕ್ಷರಾದ ಎಲ್. ಆನಂದ ಶೆಟ್ಟಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ರಾಧ ಎಚ್.ಎಸ್. ಸುಂದರ್ ರಾಜ್. ರೋಟರಿ ಅಧ್ಯಕ್ಷರಾದ ವರುಣ್. ತಾಲೂಕು ಮಕ್ಕಳ ಸಾಹಿತ್ಯ ಅಧ್ಯಕ್ಷರಾದ ಜೆ. ನಿಜಲಿಂಗಪ್ಪ. ಕಾರ್ಯದರ್ಶಿ ಬಿ. ಟಿ. ಶಂಕರ್ ಲಿಂಗಯ್ಯ ಶಿಕ್ಷಕ ಗೌರೀಶ್. ಮಲ್ಲೇಶಪ್ಪ. ಜೋಗಪ್ಪ .ಹೆಚ್.ಆರ್. ರಂಗನಾಥ್. ದೇವರಾಜ್ ಮೂರ್ತಿ .ನಾಗಸಂದ್ರಮ್ಮ ಸುಬ್ಬಣ್ಣ ಶೆಟ್ಟಿ. ಹಾರ್ಮೋನಿಯಂ ವಾದಕರಾದ ಎನ್. ಶಿವಲಿಂಗಪ್ಪ .ಎಚ್. ರಂಗಸ್ವಾಮಿ ಸಿರಾ.  ತಬಲ ವಾದಕರಾದ ಎಸ್. ಅಭಿಷೇಕ್. ನವೀನ್. ಏನ್. ಜಗದಾಂಬ .ಎನ್. ಬಸವರಾಜ್. ಸಂಗೀತ ಶಿಕ್ಷಕಿ ಲಕ್ಷ್ಮಿದೇವಮ್ಮ. ಎಂ.ಬಿ.ಲಿಂಗಪ್ಪ ಪಿ. ಎಂ.ತಿಪ್ಪೇಸ್ವಾಮಿ ರವಿಶಂಕರ್ ಹಾಗೂ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *