
ಹಿರಿಯೂರು :
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಬೆಳೆಯಮೆ ಪಾವತಿಸದೇ ವಿಳಂಬ ಮಾಡುತ್ತಿದ್ದು, ಇನ್ನೂ ಒಂದು ವಾರದ ಒಳಗಾಗಿ ಜಿಲ್ಲೆಯಲ್ಲಿ ಬೆಳೆವಿಮೆ ಪಾವತಿಸಿರುವ ಎಲ್ಲಾ ಬೆಳೆಗಳಿಗೂ ಬೆಳೆವಿಮೆಯನ್ನು ಖಾತೆಗೆ ಜಮೆ ಮಾಡದೆ ವಿಳಂಬ ನೀತಿ ಅನುಸರಿಸಿದಲ್ಲಿ ಎಪ್ರಿಲ್ 9 ರಂದು ನಿಮ್ಮ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ರಾಜ್ಯ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಹೇಳಿದರು.
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಬೆಳೆನಷ್ಟ ಅನುಭವಿಸುತ್ತಿರುವ ರೈತರಿಗೆ ಕೂಡಲೇ ಬೆಳೆಯಮೆ ಪಾವತಿಸುವಂತೆ ಒತ್ತಾಯಿಸಿ, ಸಹಾಯಕ ಕೃಷಿ ನಿರ್ದೇಶಕರ ಮುಖಾಂತರ ಸರ್ಕಾರಕ್ಕೆ ಮನವಿಪತ್ರವನ್ನು ಸಲ್ಲಿಸಿ, ನಂತರ ಅವರು ಮಾತನಾಡಿದರು.
ಕಳೆದ 2016-17ನೇ ಸಾಲಿನಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಯಲ್ಲಿದ್ದು, ರೈತರು ತಮ್ಮ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬೆಳೆವಿಮೆ ಪಾವತಿಸಲು, ಇದುವರೆಗೂ ರೈತರು ಚಳುವಳಿ ಮಾಡದೆ ವಿಮೆ ಕಂಪನಿಗಳು ಬೆಳೆ ವಿಮೆ ಪಾವತಿಸಿರುವುದಿಲ್ಲ, ಈ 2025-26 ನೇ ಸಾಲಿನ ಮತ್ತು ಈ ಹಿಂದಿನ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ರೈತರು ಬೆಳೆವಿಮೆ ಪಾವತಿಸಬೇಕು,
ತಾಲೂಕಿನಲ್ಲಿ ಮುಂಗಾರಿನಲ್ಲಿ ಮಳೆ ಪ್ರಮಾಣ ತೀರ ಕುಸಿತ ಕಂಡಿದ್ದು, ಬಿತ್ತನೆ ಪ್ರಮಾಣ ಶೇಕಡ 25ಕ್ಕಿಂತ ಕಡಿಮೆ ಬಿತ್ತನೆಯಾಗಿದ್ದು, ರೈತರು ಬೆಳೆದಂತಹ ಎಲ್ಲಾ ಬೆಳೆಗಳು ಕೈ ಸೇರದೆ ನಷ್ಟ ಅನುಭವಿಸುತ್ತಿದ್ದು, ಇದುವರೆಗೂ ಬೆಳೆವಿಮೆ ಕಂಪನಿಗಳು ರೈತರ ಖಾತೆಗೆ ಬೆಳೆ ವಿಮೆ ಪಾವತಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ,
ರೈತರು ಬೆಳೆವಿಮೆ ಕಂಪನಿಗೆ ದೂರವಾಣಿ ಮುಖಾಂತರ ಎಷ್ಟು ಬಾರಿ ಸಂಪರ್ಕ ಮಾಡಿದರೂ, ಸಂಬಂಧಪಟ್ಟ ಅಧಿಕಾರಿಗಳು ದೂರವಾಣಿ ಕರೆ ಸ್ವೀಕರಿಸದೆ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದು, ಇನ್ನು ಒಂದು ವಾರದ ಒಳಗಾಗಿ ಬೆಳೆವಿಮೆ ಪಾವತಿಸದಿದ್ದಲ್ಲಿ, ಏಪ್ರಿಲ್ 9 ಗುರುವಾರದಂದು ಸಹಾಯಕ ಕೃಷಿನಿರ್ದೇಶಕರ ಕಛೇರಿ ಮುಂದೆ ಪ್ರತಿಭಟನೆ ಕೈಗೊಳ್ಳಲಾಗುವುದು, ಅಂದಿನ ದಿನ ಜಿಲ್ಲೆ ಎಲ್ಲಾ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಕೋರಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷರಾದ ಬಿ.ಓ.ಶಿವಕುಮಾರ್, ಯುವ ಘಟಕದ ತಾಲೂಕು ಅಧ್ಯಕ್ಷರಾದ ಚೇತನ್ ಯಳನಾಡು, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್, ಕಾರ್ಯಾಧ್ಯಕ್ಷರಾದ ದಸ್ತಗೀರ್ ಸಾಬ್, ನಾಗರಾಜ್, ಉಮಾಪತಿ, ಮುನಿಸ್ವಾಮಿ, ರಂಗಸ್ವಾಮಿ, ಶಶಿಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
