
ಹಿರಿಯೂರು :
ತಾಲ್ಲೂಕಿನ ಯರಬಳ್ಳಿ ಗ್ರಾಮದ ಕಳವಿಭಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ನಡೆಸಲಾಗಿದ್ದು, ಚುನಾವಣಾ ಅಧಿಕಾರಿ ಸಿಡಿಓ ಶಿವಮೂರ್ತಿರವರ ನೇತೃತ್ವದಲ್ಲಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ರಂಗನಾಥ್ ಕಂದಿಕೆರೆ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಣಪ್ಪರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳವಿಭಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕರುಗಳಾಗಿ ಪ್ರತಾಪ್ ಸಿಂಹ, ಮುಡ್ಲಪ್ಪ, ಚಕ್ರಪಾನಿ, ಒಬಯ್ಯ, ಶಿವಲಿಂಗಪ್ಪ, ನಿಂಗಪ್ಪ, ತಿಪ್ಪೇಸ್ವಾಮಿ, ಲಕ್ಷ್ಮಕ್ಕ ಶಿವಮೂರ್ತಿ, ವಾಣಿ ರಮೇಶ್ ಇವರುಗಳು ಆಯ್ಕೆಯಾಗಿದ್ದಾರೆ.
