
ಹಿರಿಯೂರು :
“ಕೆಲ ಸಮುದಾಯಗಳು ಈ 15 ವರ್ಷಗಳಲ್ಲಿ ಸುಮಾರು 300% ಹೆಚ್ಚಳ ಆಗಿದ್ರೆ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಕೇವಲ ಸುಮಾರು 10% ಮಾತ್ರ ಹೆಚ್ಚಳ ಆಗಿದೆ ಎಂಬ ಅಮಾನವೀಯ ಅಂಶ ಗೌರವ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಲ್ಲಿದೆ. ಇದಕ್ಕಿಂತ ಅನ್ಯಾಯ ಇನ್ನೇನಿದೆ? “ಎಂದು ಕರ್ನಾಟಕ ರಾಜ್ಯ ದೊಂಬರ ಸಂಘದ ಉಪಾಧ್ಯಕ್ಷ ಡಿ.ಸಿ.ಪಾಣಿ ಪತ್ರಿಕಾ ಹೇಳಿಕೆಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ರಾಜ್ಯದಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಜನಸಂಖ್ಯೆ 10 ಲಕ್ಷಕ್ಕಿಂತ ಹೆಚ್ಚಿದೆ. ಅದನ್ನು ನಾವು ದಾಖಲೆ ಸಮೇತ ನ್ಯಾಯಸ್ಥಾನದಲ್ಲಿ ನಿರೂಪಿಸುತ್ತೇವೆ.” ಎಂಬುದಾಗಿ ಕರ್ನಾಟಕ ರಾಜ್ಯ ದೊಂಬರ ಸಂಘದ ಉಪಾಧ್ಯಕ್ಷ ಡಿ.ಸಿ.ಪಾಣಿ ಅವರು ಕಾನೂನಿನ ಹೋರಾಟದ ಸೂಚನೆಯನ್ನು ನೀಡಿದ್ದಾರೆ.
