
ಹಿರಿಯೂರು :
ದೇಶದಲ್ಲಿಯೇ ಭಾಷಾ ವೈವಿದ್ಯತೆ, ಏಕತೆ, ಸಮಗ್ರತೆ ಮತ್ತು ಸಹಬಾಳ್ವೆಗೆ ಹೆಸರಾಗಿ ಉಳಿದಿರುವುದು ನಮ್ಮ ಕರ್ನಾಟಕದಲ್ಲಿ ಮಾತ್ರ, ನಮ್ಮ ಕರ್ನಾಟಕ ನಮ್ಮ ಸಾಂಸ್ಕೃತಿಕ ಹೆಮ್ಮೆಯಾಗಿದೆ ಎಂಬುದಾಗಿ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯ ಹೇಳಿದರು.
ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರದಂದು “ಕರ್ನಾಟಕದಲ್ಲಿ ಸಮಾಜ” ಕುರಿತು ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕವು ಹಲವು ಧರ್ಮ ಜಾತಿ ಆಚರಣೆ ಬುಡಕಟ್ಟು ಭಾಷಾ ವೈವಿಧ್ಯತೆ ಹೊಂದಿದ್ದರು, ಸಹಬಾಳ್ವೆಗೆ ಧಕ್ಕೆಯಾಗಿಲ್ಲ ಇದು ಕರ್ನಾಟಕದ ಹಿರಿಮೆ ಪಂಪನಿಂದ ಹಂಪನಾವರೆಗೆ ಸಾವಿರಾರು ಕವಿಗಳು ಕೃತಿಗಳನ್ನು ರಚಿಸಿ ಶ್ರೀಮಂತ ಗೊಳಿಸಿದ್ದಾರೆ ಎಂದರು.
ಪ್ರಾಧ್ಯಾಪಕರಾದ ಎಸ್.ಜಿ.ರಂಗಸ್ವಾಮಿಸಕ್ಕರ ಮಾತನಾಡಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು ಎಂಬ ನಿಟ್ಟಿನಲ್ಲಿ ನಡೆದ ಗೋಕಾಕ್ ಚಳುವಳಿ ಸ್ಮರಣೀಯ, ಕಲಾವಿದರು ಕನ್ನಡಪರ ಹೋರಾಟಗಾರರು ನಡೆಸಿದ ಹೋರಾಟ ಪರಿಸರ ಚಳುವಳಿ ದಲಿತ ಹೋರಾಟಗಾರರು ಮಹಿಳಾ ಚಳುವಳಿ ರೈತ ಚಳುವಳಿ ಇತಿಹಾಸದಲ್ಲಿ ಉಳಿಯಲಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಮಹಮದ್ ಸಾದತ್, ಸಹಾಯಕ ಪ್ರಾಧ್ಯಾಪಕ ಬಸವರಾಜ್ ಟಿ.ಬೆಳಗಟ್ಟ, ಉಪನ್ಯಾಸಕರಾದ ರಮೇಶ್ ತಳವಾರ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
