March 5, 2026
0001

ಹಿರಿಯೂರು:

ಕೈವಾರ ತಾತಯ್ಯ ನವರ ಜೀವನ ಚರಿತ್ರೆಯನ್ನು  ಓದಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳುವುದರ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬಹುದು ಎಂಬುದಾಗಿ ತಹಶೀಲ್ದಾರ್ ರಾದ ಸಿದ್ದೇಶ್ ಅವರು ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ  ತಾಲ್ಲೂಕು  ಆಡಳಿತ, ನಗರಸಭೆ ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೈವಾರತಾತಯ್ಯ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಶಿಕ್ಷಕರಾದ ಬಿ.ಜಿ.ಪದ್ಮನಾಥ್ ಅವರು ಮಾತನಾಡಿ ಕೈವಾರತಾತಯ್ಯ ಅವರ ಪವಾಡಗಳು  ಹಾಗೂ  ಸಮಾಜಕ್ಕೆ ಅವರು ನೀಡಿದ ಕೊಡುಗೆಗಳು ಅಪಾರವಾಗಿದ್ದು, ಈ ಮಹಾನುಬಾವರನ್ನು ಯಾವುದೇ ಜಾತಿ ಜನಾಂಗಕ್ಕೆ ಸೀಮಿತಗೊಳಿಸಬಾರದು.ಅವರ ಆದರ್ಶಗಳನ್ನು  ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು  ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಬಲಿಜ ಸಮಾಜದಅಧ್ಯಕ್ಷರಾದ ಶೆಟ್ಟಿ, ಪ್ರಭಾಕರ್, ರಮೇಶ್, ಲಕ್ಷ್ಮೀನಾರಾಯಣ, ಪ್ರಕಾಶ್, ಅಣ್ಣೇಶ್ ಕುಮಾರ್, ನರೇಂದ್ರಬಾಬು, ಮಂಜುನಾಥ್, ವೆಂಕಟಾಚಲ, ಶಿವರಾಂ, ಸಿದ್ಧಪ್ಪ, ರವಿಪ್ರಸಾದ್, ಮೋಹಿನಿ, ಶ್ರೀನಿವಾಸ್, ಬಲಿಜ ಸಮಾಜದ ಮುಖಂಡರು, ತಾಲ್ಲೂಕುಮಟ್ಟದ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *