March 2, 2026
00004

ಹಿರಿಯೂರು:

2026ರಲ್ಲಿ ನಡೆಯುವ ವಿಧಾನಸಭೆ  ಚುನಾವಣೆಯಲ್ಲಿ ಮತ್ತೊಮ್ಮೆ  ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ  ಬರುವಂತೆ ಮಾಡಲು  ಮಹಿಳಾ ಕಾರ್ಯಕರ್ತರು  ಹೆಚ್ಚಿನ ಶ್ರಮ ವಹಿಸಬೇಕು  ಎಂಬುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್ ಅವರು ಹೇಳಿದರು.

ನಗರದ ಕೆ.ಪಿ.ಸಿ.ಸಿ. ಕಚೇರಿಯಲ್ಲಿ  ಗುರುವಾರ ಹಮ್ಮಿಕೊಳ್ಳಲಾಗಿದ್ದ  ಕಾಂಗ್ರೆಸ್ ಮಹಿಳಾ  ಘಟಕದ  ಪದಾಧಿಕಾರಿಗಳ ಸಭೆಯಲ್ಲಿ  ಪಾಲ್ಗೊಂಡು ಅವರು ಮಾತನಾಡಿದರು.

 ಕಾಂಗ್ರೆಸ್  ಸರ್ಕಾರ ಗೃಹಲಕ್ಷ್ಮೀ ಶಕ್ತಿ, ಯುವನಿಧಿ ಯೋಜನೆಗಳನ್ನು  ಜಾರಿಗೊಳಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ ನೀಡಿದೆ. ಹಿಂದಿನ ಬಿ.ಜೆ.ಪಿ- ಜೆ.ಡಿ.ಎಸ್. ಸರ್ಕಾರಗಳು ಬಡವರ ಪರವಾದ ಇಂತಹ ಯಾವುದೇ ಯೋಜನೆಗಳನ್ನು ಜಾರಿ ಮಾಡಿಲ್ಲ ಎಂಬುದನ್ನು ಸಾರ್ವಜನಿಕರ ಗಮನಕ್ಕೆ  ತರಬೇಕು. ಎಂದರಲ್ಲದೆ,

ಗೃಹಲಕ್ಷ್ಮೀ ಯೋಜನೆಯಿಂದ  ಬಂದ ಹಣವನ್ನು ಒಟ್ಟುಗೂಡಿಸಿ ಕಿರಾಣಿ ಅಂಗಡಿ, ಟೈಲರಿಂಗ್ ಆರಂಭಿಸಿದ ಮಹಿಳೆಯರಿದ್ದಾರೆ. ಈ ಬಗ್ಗೆ  ನಮ್ಮ ಮುಖಂಡರು, ಮಹಿಳೆಯರಿಗೆ ಅರ್ಥ ಮಾಡಿಸಬೇಕು ಎಂಬುದಾಗಿ ಅವರು ಸಲಹೆ ನೀಡಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗುವುದು. ಅಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ವೇದಿಕೆಗೆ ಅಹ್ವಾನಿಸಿ, ಯೋಜನೆಗಳಿಂದ ಅವರ ಬದುಕು ಬದಲಾಗಿರುವ ಬಗ್ಗೆ  ಹೇಳಿಸಬೇಕು ಎಂಬುದಾಗಿ ಅವರು ಹೇಳಿದರು.

 ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಶ್ರೀಮತಿ ಜೆ.ಆರ್.ಸುಜಾತ, ರಜೀಯಸುಲ್ತಾನ, ನಾಗರತ್ನಮ್ಮ, ಮಮತಾ, ಮಂಜುಳಾ, ಶಕುಂತಲಾ, ಜ್ಯೋತಿಲಕ್ಷ್ಮಿ, , ಇಂದಿರಾ, ವಾಣಿ, ಸೆಲ್ವರಾಣಿ, ಆಶ್ರಫ್ ಜಾನ್, ಕರಿಯಮ್ಮ, ಗಿರಿಜಮ್ಮ, ಭಾಗ್ಯಮ್ಮ, ಹಸೀನಾ, ಮಂಜುಳಾ, ಸಲ್ಮಾ, ಸಮೀಂಉನ್ನೀಸಾ, ರಂಗ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *