March 2, 2026
003

ಹಿರಿಯೂರು :     

ಹಿರಿಯೂರು ಶಾಲಾ ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷರಾದ ಎ.ಎಂ. ಅಮೃತೇಶ್ವರಸ್ವಾಮಿರವರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ವತಿಯಿಂದ ಕಸಬಾ ಹೋಬಳಿಯ 1ನೇ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಕಸಬಾ ಹೋಬಳಿಯ ಅಧ್ಯಕ್ಷರಾದ ಪೊಲೀಸ್ ಬೇಟೆ ಪ್ರಸನ್ನ ರವರು ವಹಿಸಿದ್ದರು. 1ನೇ ಕಸಬಾ ಹೋಬಳಿ ಸಾಹಿತ್ಯ ಸಮ್ಮೇಳನದ ಲೋಗೋವನ್ನು ಹಿರಿಯೂರು ಶಾಲಾ ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷರಾದ ಎ.ಎಂ.ಅಮೃತೇಶ್ವರಸ್ವಾಮಿ ಇವರು ಬಿಡುಗಡೆ ಮಾಡಿದರು.

ಈ ಸಭೆಯಲ್ಲಿ ಹಿರಿಯೂರು ಶಾಲಾ ಶಿಕ್ಷಣ  ಸುಧಾರಣಾ ಸಮಿತಿ ಅಧ್ಯಕ್ಷರಾದ ಎ.ಎಂ.ಅಮೃತೇಶ್ವರಸ್ವಾಮಿ ಇವರನ್ನು ೧ನೇ ಕಸಬಾ ಹೋಬಳಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಅನುಮೋದಿಸಲಾಯಿತು.

ಈ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಗೌರವ ಕಾರ್ಯದರ್ಶಿ ಅಜ್ಗರ್ ಅಹಮದ್, ಜಿ.ಆರ್. ನಂದವರಿಕ್, ಶ್ರೀಮತಿ ಶಿವರಂಜಿನಿ, ಉಮಾಶಂಕರ್, ಹೊರಕೇರಪ್ಪ, ಟಿ.ಆರ್.ದಾಸ್, ‌ ಗ್ಯಾಸ್ ವಿಜಯ್, ಶಿವಮೂರ್ತಿ (‌ಶಿವಣ್ಣ), ಸಿ.ನಾಗೇಂದ್ರಪ್ಪ ಸೇರಿದಂತೆ  ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *