
ಹಿರಿಯೂರು:
ತಾಲ್ಲೂಕಿನ ಹಾಲು ಉತ್ಪಾದಕರ ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಆಡಳಿತ ಮಂಡಳಿ ಚರ್ಚಿಸಿ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂಬುದಾಗಿ ಶಿಮುಲ್ ನಿರ್ದೇಶಕರಾದ ಬಿ.ಸಿ.ಸಂಜೀವಮೂರ್ತಿ ಅವರು ಹೇಳಿದರು.
ತಾಲ್ಲೂಕಿನ ಕೆ.ಆರ್.ಹಳ್ಳಿ, ಲಕ್ಕವ್ವನಹಳ್ಳಿಯ ಬಿ.ಎಂ.ಸಿ. ಹಾಲಿನ ಕೇಂದ್ರಗಳ ಕ್ಲಸ್ಟರ್ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಕುಂದುಕೊರತೆಗಳ ಸಂದರ್ಶನ ಕಾರ್ಯಕ್ರಮವನ್ನುಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಹಾಲು ಉತ್ಪಾದಕದಿಂದ ಯಾವುದೇ ಸಮಸ್ಯೆಗಳ ದೂರುಗಳು ಕೇಳಿ ಬಂದಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣವೇ ನಮ್ಮ ಹಾಗೂ ಅಧಿಕಾರಿಗಳ ಗಮನಕ್ಕೆ ತರಬೇಕು ನಾವು ಬಗೆಹರಿಸುತ್ತೇವೆ. ಎಂದರಲ್ಲದೆ,
ತಾಲ್ಲೂಕಿಗೆ ಮ್ಯಾಟ್ ಬಂದಿದ್ದು, ಶೀಘ್ರದಲ್ಲೇ ವಿತರಿಸಲಾಗುವುದು ತಾಲ್ಲೂಕಿನಲ್ಲಿ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದೆ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಉಪವಿಭಾಗಾಧಿಕಾರಿ ಪುಟ್ಟರಾಜು, ಮಾರ್ಗ ವಿಸ್ತರಣಾಧಿಕಾರಿ ನಮಾಜ್ ಬೇಗ್, ಎಸ್.ಜಿ.ಕೃಷ್ಣಕುಮಾರ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಗುಣಶೇಖರ್ , ಜೆಜೆಹಳ್ಳಿ ಗೋವಿಂದರಾಜು, ಸುರೇಶ್ ಬಾಬು ಹಾಗೂ ತಾಲ್ಲೂಕಿನ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

