March 2, 2026
0002

ಹಿರಿಯೂರು:

ಶಿಕ್ಷಣ ಎನ್ನುವುದು ತಲೆಗೆ ತುರುಕುವ ವಿಚಾರವಲ್ಲ. ಅದು  ಮನಸ್ಸಿಗೆ ತರಬೇತಿ ಕೊಡುವ ಕಾಯಕವಾಗಿದೆ. ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವಮಾನವನಾಗಿ ಹುಟ್ಟುತ್ತಾನೆ. ಆದರೆ, ಸಾಮಾನ್ಯ  ನಾಗರೀಕರು ಆ ಮಗುವನ್ನು ಅಲ್ಪಮಾನವನನ್ನಾಗಿ ಮಾಡುತ್ತಾರೆ. ಮತ್ತೆ ಆ ಮಗುವನ್ನು ವಿಶ್ವಮಾನವನ್ನಾಗಿ ಮಾಡುವುದೇ ಶಿಕ್ಷಣದ  ಮೂಲ ಉದ್ದೇಶವಾಗಿದೆ.  ಎಂಬುದಾಗಿ ಅತ್ಯುತ್ತಮ ಗಣಿತ ಶಿಕ್ಷಕ ಪ್ರಶಸ್ತಿ ವಿಜೇತರಾದ ಡಾ.ಜಿ.ಎಸ್. ಗಣೇಶ್ ಅವರು ಹೇಳಿದರು.

ತಾಲ್ಲೂಕಿನ ಬ್ಯಾಡರಹಳ್ಳಿ ಅಧಿರ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ  ಶಾಲಾ ವಾರ್ಷಿಕೋತ್ಸವ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಂಸ್ಕಾರ ಹಾಗೂ ಮೌಲ್ಯಗಳನ್ನು ಒಳಗೊಂಡ ಶಿಕ್ಷಣವನ್ನು ನೀಡುವ ಶಿಕ್ಷಣ ಸಂಸ್ಥೆಗಳನ್ನು ತೆರೆದರೆ 10 ಜೈಲುಗಳನ್ನು ಮುಚ್ಚಬಹುದು ಎಂಬ ಮಾತಿದೆ. ಈಗಿನ ಮಕ್ಕಳಿಗೆ ಕೇವಲ ಪಠ್ಯಕ್ರಮದ  ಬಗ್ಗೆ ಹೇಳಿದರೆ ಸಾಲದು.ಸಾಮಾಜಿಕಳಕಳಿ, ಮಾನವೀಯ ಮೌಲ್ಯ, ಸಂಸ್ಕಾರ, ಸಂಸ್ಕೃತಿ ಇವೆಲ್ಲದರ ಬಗ್ಗೆಯೂ ಸಹ ತಿಳಿಹೇಳಬೇಕಾಗುತ್ತದೆ. ಎಂದರಲ್ಲದೆ, 

ಪೋಷಕರುಗಳಾದ ನಾವುಗಳು ಉತ್ತಮ ಸನ್ಮಾರ್ಗದಲ್ಲಿ ಸಾಗುವುದರೊಂದಿಗೆ ಮಕಕಳನ್ನು ಸಹ ಸರಿದಾರಿಗೆ ತರಲು ಪ್ರಯತ್ನಿಸಬೇಕು. ಆಗಲೇ ನಾವು ಉತ್ತಮ ಸಮಾಜಕ್ಕೆ ಮಾದರಿಯಾಗಲು ಸಾಧ್ಯವಾಗುತ್ತದೆ. ಗುರುಹಿರಿಯನ್ನು ಗೌರವಿಸಲು ಸಾಧ್ಯವಾಗುತ್ತದೆ.

ವಿನಯ, ವಿವೇಕ, ಸಂಸ್ಕಾರ, ಮಾನವೀಯ ಮೌಲ್ಯಗಳಿಲ್ಲದ ಯಾವುದೇ ವಿದ್ಯೆ ಮತ್ತು ಹುದ್ಧೆ, ವ್ಯರ್ಥವಾಗುತ್ತದೆ. ಕಣ್ಣಿಗೆ ಕಾಣದ ದೇವರಿಗೆ ಚಿನ್ನ ಹಾಕುವ ಮುನ್ನ ಕಣ್ಣೆದುರಿಗೆ  ಕಾಣುವ ಪ್ರತ್ಯಕ್ಷ ದೇವರುಗಳಾದ ತಂದೆ-ತಾಯಿಯರಿಗೆ ಅನ್ನ ಹಾಕುವ ಮಾತಿನಂತೆ ನಾವೆಲ್ಲರೂ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸೋಣ ಎಂಬುದಾಗಿ ಅವರು ಹೇಳಿದರು.

ಶಾಲೆಯ  ಅಧ್ಯಕ್ಷರಾದ ಬೋರೇಗೌಡ ಅವರು ಮಾತನಾಡಿ  ಬಯಲುಸೀಮೆಯ  ಈ ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ  ತೆರೆದ ಈ ಶಾಲೆ ಸಮಾಜಕ್ಕೆ ಸುಸಂಕೃತ,  ಸಜ್ಜನ ಪ್ರಜೆಗಳನ್ನು ರೂಪಿಸಿಕೊಡಲಿದೆ. ಇಂದು ಎಲ್ಲರೂ ಅಂಕಗಳಿಕೆಯ  ಜೊತೆಗೆ, ಸಂಸ್ಕೃತಿ, ಸಂಸ್ಕೃತಿ, ಸಂಸ್ಕಾರ ಹಾಗೂ ಸಜ್ಜನಿಕೆಯನ್ನು ಕಲಿಸಿಕೊಡಬೇಕಾಗಿದೆ ಎಂದರಲ್ಲದೆ,

ಮಕ್ಕಳ ಬಗ್ಗೆ ಶಾಲೆಯ ಶಿಕ್ಷಕರಷ್ಟೇ ಜವಬ್ದಾರಿ ಪೋಷಕರ ಮೇಲೂ ಇದೆ. ಮಕ್ಕಳಿಗೆ ಮನೆಯಲ್ಲಿಯೂ ಓದುವ  ವಾತಾವರಣವನ್ನು  ನಿರ್ಮಾಣ ಮಾಡಿಕೊಡಿ.ಇಂದಿನ ಪೋಷಕರು ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತನ್ನು ಮರೆತು ಬಿಟ್ಟಿದ್ದಾರೆ. ಪೋಷಕರು ಮತ್ತು ಶಿಕ್ಷಕರು ತಮ್ಮ ಜವಬ್ದಾರಿ ಅರಿತು ಕೆಲಸ ಮಾಡಿದರೆ ಈ ಸಮಾಜಕ್ಕೆ ಪ್ರತಿಭಾನ್ವಿತ, ಸಜ್ಜನ ಮಕ್ಕಳನ್ನು ಕೊಡಲು ಸಾಧ್ಯವಾಗುತ್ತದೆ. ಹಾಗಾಗಿ ಗುಣಮಟ್ಟದ ವಿದ್ಯೆಯನ್ನು ಮಕ್ಕಳಿಗೆ ಧಾರೆ ಎರೆಯೋಣ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ವಿವಿಧ ರೀತಿಯ ಆಕರ್ಷಕ ನೃತ್ಯಗಳಿಂದ  ನೆರೆದ ಜನರ ಮನ ಸೆಳೆದರು. ಈ ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ  ಮೀಸಲಾತಿ ಹೋರಾಟ ಸಮಿತಿ ಜಂಟಿ ಕಾರ್ಯದರ್ಶಿ ನಾಗರಾಜ್ ಯಲಚವಾಡಿ, ಹಿರಿಯ ವೈದ್ಯ ಡಾ.ವಿಷ್ಣು, ಸಂಸ್ಥೆಯ  ಕಾರ್ಯದರ್ಶಿ ಕೆ.ಶ್ರುತಿ, ನಿರ್ದೇಶಕರಾದ ಹೆಚ್.ಬಿ.ಮಿಥುನ್, ಮುಖ್ಯ ಶಿಕ್ಷಕಿ ಡಿ.ಶಶಿಕಲಾ, ಶಿಕ್ಷಕಿಯರಾದ ಸಾಧಿಯಾಬಾನು, ಶ್ವೇತಾ, ಕಾವೇರಿ, ನೃತ್ಯ, ಸಂಯೋಜಕರಾದ ಪ್ರದೀಪ್ ಹೆಲ್ವಾರ್ , ಶಾಲಾ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

About The Author

Leave a Reply

Your email address will not be published. Required fields are marked *