March 2, 2026
00009

ಹಿರಿಯೂರು:

ಬಂಜಾರ ಸಮುದಾಯದ ರಕ್ಷಣೆಗಾಗಿ, ಬಂಜಾರಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗಾಗಿ ಜೀವನಪೂರ್ತಿ ಹೋರಾಡಿದ  ಮಾಹಾನ್ ಸಂತ ಸೇವಾಲಾಲ್, ಬಿ.ಜೆ.ಪಿ. ತಾಲ್ಲೂಕು ಘಟಕದ ಅಧ್ಯಕ್ಷರಾದ ಕೆ.ಅಭಿನಂದನ್ ಅವರು ಹೇಳಿದರು.

ನಗರದ ಬಿ.ಜೆ.ಪಿ. ಕಚೇರಿಯಲ್ಲಿ  ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಂತಸೇವಾಲಾಲ್  ಮಹಾರಾಜ್ ಜಯಂತಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

ಬಂಜಾರ ಸಮುದಾಯದ  ಏಕತೆ, ಆತ್ಮಗೌರವ ಮತ್ತು ಧಾರ್ಮಿಕ ಮೌಲ್ಯಗಳ ಪ್ರತೀಕವಾಗಿದ್ದರು. ಅವರ ತತ್ವಗಳನ್ನು ಅನುಸರಿಸುವ ಮೂಲಕ ಸಮಾಜವನ್ನು ಇನ್ನಷ್ಟು ಸುಸ್ಥಿರ ಗೊಳಿಸಬಹುದು ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ  ನಿತಿನ್ ಗೌಡ, ವೇದಮೂರ್ತಿ, ವಾಸು, ನಾಗೇಂದ್ರ, ಗುರು, ಮಂಜುನಾಯ್ಕ, ಕಿರಣ್ ನಾಯ್ಕ, ಈಶ್ವರ್ ನಾಯ್ಕ, ವೆಂಕಟೇಶ್ ನಾಯ್ಕ, ಗಿರೀಶ್ ನಾಯ್ಕ, ಮಾರಣ್ಣ, ಬಸವರಾಜ, ಮಂಜುನಾಥ್, ಮುಬಾರಕ್ ಹಾಗೂ ಬಂಜಾರ ಸಮುದಾಯದ ಹಲವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *