
ಹಿರಿಯೂರು:
ನಗರದ ಸಿದ್ಧನಾಯಕ ವೃತ್ತದಲ್ಲಿ ಬುಧವಾರ ಸಂಜೆ ಮದಕರಿ ಯುವಕ ಸಂಘದಿಂದ ತೇರುಮಲ್ಲೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಜಂಗೀ ಕುಸ್ತಿಯಲ್ಲಿ ಬೆಳಗಾವಿಯ ಅಪ್ಪು ಅವರು ದಾವಣಗೆರೆಯ ಗಿರಿಶ್ ಅವರನ್ನು ಮಣಿಸಿ ಪ್ರಥಮ ಸ್ಥಾನ ಪಡೆದರೆ, ದಾವಣಗೆರೆಯ ಯೋಗೇಶ್ ಬೆಳಗಾವಿಯ ಪರಶುರಾಮ ಅವರನ್ನು ಸೋಲಿಇ ದ್ವಿತೀಯ ಸ್ಥಾನ ಹಾಗೂ 3ನೇ ಸ್ಥಾನದ ಪೈಪೋಟಿಯಲ್ಲಿ ದಾವಣಗೆರೆಯ ಮಹಮ್ಮದ್ ಇರ್ಫಾನ್ ಸಾಗರದ ಸೋಮೇಶ್ ಪರಾಭವಗೊಳಿಸಿದರು.
ವಿಜೇತರಿಗೆ ಪ್ರಥಮ ಬಹುಮಾನ12ಸಾವಿರ, ದ್ವಿತೀಯಬಹುಮಾನ 10ಸಾವಿರ ಹಾಗೂ ತೃತೀಯ ಬಹುಮಾನ 8ಸಾವಿರ ಹಾಗೂ ಆಕರ್ಷಕ ಪಾರಿತೋಷಕವನ್ನು ಮದಕರಿ ಯುವಕ ಸಂಘದ ಪದಾಧಿಕಾರಿಗಳು ವಿತರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ಜಾತ್ರಾ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್, ಸಾಗರ್, ರಘುವೀರ್, ಶಿವಕುಮಾರ್, ಸುದೀಪ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಆರ್.ನಾಗೇಂದ್ರನಾಯ್ಕ, ಮುಖಂಡರಾದ ಖಾದಿ ಜೆ.ರಮೇಶ್, ಈರಲಿಂಗೇಗೌಡ, ಬಿ.ಎನ್.ಪ್ರಕಾಶ್, ಸತ್ಯನಾರಾಯಣಮೂರ್ತಿ, ಸಂದೀಪ್, ಶಿವು, ಸಿದ್ದೇಶ್, ದೇವರಾಜು, ಜ್ಞಾನೇಶ್, ಖಲೀಲ್, ವಿ.ಶಿವಕುಮಾರ್. ಭುವನೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

