March 2, 2026
000002

ಹಿರಿಯೂರು :

ನಗರದ ನ್ಯೂ ಡೈಮಂಡ್ ಸ್ಪೋರ್ಟ್ಸ್ ಕ್ಲಬ್ ಇವರು ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಸುಮಾರು 40 ವರ್ಷಗಳಿಂದ ನಡೆಸಿಕೊಂಡು ಬಂದಿರುತ್ತಾರೆ, ಇವರಿಗೆ ನಮ್ಮ ಸಂಪೂರ್ಣ ಸಹಕಾರ ಹಾಗೂ ಸಹಾಯ ಎಂದೆಂದಿಗೂ ಇರುತ್ತದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ನ್ಯೂ ಡೈಮಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಜಮಟ್ಟದ ಹೊಲಲು ಬೆಳಕಿನ ಪುರುಷರ ಆಹ್ವಾನಿತ ಕಬ್ಬಡಿ ಪಂದ್ಯಾವಳಿಯ ಮುಕ್ತಾಯ ಸಮಾರಂಭದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ, ನಂತರ ಅವರು ಮಾತನಾಡಿದರು.

ಪ್ರತಿವರ್ಷ ಈ ಗ್ರಾಮೀಣ ಕಬ್ಬಡ್ಡಿ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲು ನಮ್ಮಗಳ ಸಂಪೂರ್ಣ ಸಹಕಾರ ಹಾಗೂ ಸಹಾಯ ಎಂದೆಂದಿಗೂ ಇರುತ್ತದೆ, ಈ ಕ್ರೀಡೆಯಲ್ಲಿ ಸುಮಾರು16 ಪುರುಷ ತಂಡಗಳು ಭಾಗವಹಿಸಿದ್ದವು.

ಇದರಲ್ಲಿ ಪ್ರಥಮ ಬಹುಮಾನವನ್ನು ಬೆಂಗಳೂರಿನ ತಂಡ ಪಡೆದುಕೊಂಡಿರುತ್ತದೆ ದ್ವಿತೀಯ ಬಹುಮಾನವನ್ನು ಮೂಡುಬಿದರೆ ಆಳ್ವ ತಂಡ ಮೂರನೆಯ ಸ್ಥಾನ ನ್ಯೂ ಡೈಮಂಡ್ ಹಾಗೂ ನಾಲ್ಕನೆಯ ಸ್ಥಾನ ತುಮಕೂರು ತಂಡ ಪಡೆದಿರುತ್ತದೆ.

ಈ ಮುಕ್ತಾಯ ಸಮಾರಂಭದಲ್ಲಿ ಅಮೃತೇಶ್ವರ ಸ್ವಾಮಿ ಗ್ರೀಸ್ ಆಲಿ, ಖಾದಿ ರಮೇಶ್, ಶಕ್ತಿ ಗ್ರೂಪ್ ನ ಎಲ್ಲಾ ಸದಸ್ಯರು ಹಾಗೂ ಚಲನ ಚಿತ್ರನಟರಾದ ಜಾಹಿದ್ ಖಾನ್, ಹೆಚ್.ಎಂ.ಶಕೀಲ್ ನವಾಜ್, ಕೆ.ವಿ.ಅಮರೇಶ್, ಸಂಘದ ಅಧ್ಯಕ್ಷರಾದ ಎಚ್.ಪಿ.ಯೋಗಾನಂದ, ಗೌರವ ಅಧ್ಯಕ್ಷರಾದ ಹೆಚ್.ಎಸ್.ಶ್ರೀನಿವಾಸ ನಾಯಕ, ಕಾರ್ಯದರ್ಶಿಯಾದ ಟಿ.ಬಾಲಾಜಿ, ಪಂದ್ಯಾವಳಿ ಸಂಘಟನಾ ಕಾರ್ಯದರ್ಶಿ ರವಿ, ಪಂದ್ಯಾವಳಿ ಸಮಿತಿಯ ಖಜಾಂಚಿ ಕುಮಾರ್, ಸಂಘದ ಸಂಘಟನಾ ಕಾರ್ಯದರ್ಶಿ ಜಗದೀಶ್ ಬಂಡಾರ್, ಎಸ್.ಓ.ಮಲ್ಲೇಶಿ, ವಿಜಯಕುಮಾರ್, ಉಪಾಧ್ಯಕ್ಷರಾದ ಹೆಚ್.ಓಂಕಾರೇಶ್ವರ, ಆರ್.ಎಸ್.ಸುರೇಶ್, ಸಂಚಾಲಕರಾದ ಎಮ್.ಮೊಹಮದ್ ಭಾಷಾ, ಎಂ.ತಿಪ್ಪೇಸ್ವಾಮಿಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *