March 2, 2026
000002

ಹಿರಿಯೂರು:

ನಮ್ಮ ಭಾರತ ದೇಶ ಸ್ವಾತಂತ್ರ್ಯ ನಂತರ ವಿವಿಧ ಪ್ರದೇಶಗಳನ್ನು ಒಗ್ಗೂಡಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನದೇ ಆದ ಆಡಳಿತ ವ್ಯವಸ್ಥೆಯನ್ನು ರಚಿಸಿಕೊಂಡು, ನಮ್ಮ ದೇಶದಲ್ಲಿ ಸಂವಿಧಾನವನ್ನು ಜಾರಿಗೊಳಿಸಿದ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂಬುದಾಗಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಚಿತ್ತಪ್ಪ  ಹೇಳಿದರು.

ತಾಲ್ಲೂಕಿನ ಐಮಂಗಳ ಹೋಬಳಿಯ  ಬುರುಜನರೂಪ್ಪ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜುರೆ  ಸಾಲುಹುಣಿಸೆ ಗೊಲ್ಲರಹಟ್ಟಿಯ ಗ್ರಾಮದ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜ ಹಾರೋಹಣವನ್ನು ನೆರವೇರಿಸಿ, ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಎ.ಎಂ.ಎಸ್. ಕಂಪ್ಯೂಟರ್ ತರಬೇತಿ ಕೇಂದ್ರ ಹಿರಿಯೂರು ಇವರ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ  ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಎಲ್ಲಾ ಮಕ್ಕಳಿಗೂ ಉಚಿತವಾಗಿ ಶಾಲಾ ಕಿಟ್, ನೋಟ್ ಬುಕ್, ಪೆನ್ನು, ಕಿಟ್ ವಿತರಣೆ ಜೊತೆಗೆ ನಲಿ-ಕಲಿ ವಿದ್ಯಾರ್ಥಿಗಳಿಗೆ ಚೇರುಗಳನ್ನು ,ಟೇಬಲ್ ಗಳನ್ನು ಉಚಿತವಾಗಿ ಎ.ಎಂ.ಎಸ್. ಕಂಪ್ಯೂಟರ್ ತರಬೇತಿ ಕೇಂದ್ರ ಸಂಸ್ಥಾಪಕರಾದ ಸಿ.ಮುರುಳಿಧರ ಮತ್ತು ಶ್ರೀಮತಿ ರೋಹಿಣಿ ಮುರುಳಿಧರ ರವರು ಶಾಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಿತರಿಸಿದರು.

ಈ ಸಂದರ್ಭದಲ್ಲಿ  ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪಾರ್ವತಮ್ಮ, ಸಹಶಿಕ್ಷಕಿಯರಾದ ಶ್ರೀಮತಿ ಸುಜಾತಮ್ಮ, ಹಾಗೂ ಅಂಗನವಾಡಿ ಕಾರ್ಯಕರ್ತರಾದ ಶ್ರೀಮತಿ ಪಾರ್ವತಮ್ಮ, ಶ್ರೀಮತಿಗಂಗಮ್ಮ, ಶ್ರೀಮತಿ ಮಂಜುಳಕೃಷ್ಣಪ್ಪನವರು, ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ಮಹಾಲಕ್ಷ್ಮಿ, ಸದಸ್ಯರಾದ ಪುರುಷೋತ್ತಮ್,ಸಾಲುಹುಣಿಸೆ  ಗ್ರಾಮಪಂಚಾಯಿತಿ ಮಾಜಿ ಸದಸ್ಯರಾದ ರಂಗಸ್ವಾಮಿ, ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಶ್ರೀಮತಿ ಲಕ್ಷ್ಮಕ್ಕ,ಚಂದ್ರಪ್ಪನಾವರು, ಶ್ರೀಮತಿಗಂಗಮ್ಮನಾವರು, ಶ್ರೀಮತಿ ಯಶೋಧ, ಯುವ ಮುಖಂಡರುಗಳು ಮತ್ತು ಊರಿನ ಹಿರಿಯ ಮುಖಂಡರುಗಳು , ಮಹಿಳಾ ಸದಸ್ಯರು  ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *