March 2, 2026
00003

ಹಿರಿಯೂರು :

ಕನ್ನಡದ ಮೇರುನಟ ಡಾ.ವಿಷ್ಣುವರ್ಧನ್ ರವರು ಪುಟ್ಟಣ್ಣ ಕಣಗಾಲ್ ರವರ ನಾಗರಹಾವು ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗವನ್ನು ಪ್ರವೇಶಿಸಿ, ರಾಮಾಚಾರಿ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದರು, ಸುಮಾರು 220ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಸಾಹಸಸಿಂಹ ಎಂಬುದಾಗಿ ಹೆಸರು ಮಾಡಿದ್ದಾರೆ, ಇವರ ವ್ಯಕ್ತಿತ್ವ ಇಂದಿನ ನಾಯಕ ನಟರಿಗೆ ಮಾದರಿಯಾಗಬೇಕು ಎಂಬುದಾಗಿ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ ಹೇಳಿದರು.

ನಗರದ ಶ್ರೀಶೈಲ ಸರ್ಕಲ್ ನಲ್ಲಿ ವಿಷ್ಣು ಸೇನಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ರವರ 75 ನೇ ವರ್ಷದ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿಷ್ಣು ಸೇನಾ ಸಮಿತಿ ವತಿಯಿಂದ ಡಾ.ವಿಷ್ಣುವರ್ಧನ್ ರವರ 75 ನೇ ವರ್ಷದ ಜನ್ಮದಿನಾಚರಣೆಯನ್ನು ಕೇಕ್ ಕತ್ತರಿಸಿ ನೆರೆದಿದ್ದವರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.ಆ ನಂತರ ಅನ್ನದಾನವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಕಲಾವಿದ ಹಾಗೂ ಪತ್ರಕರ್ತ ಮಹೇಶ್ ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ವಿ.ಸಿದ್ಧಪ್ಪಮಡಿವಾಳ, ಉಪಾಧ್ಯಕ್ಷರಾದ ಎಂ.ಸತೀಶ್, ಎನ್.ಮಂಜುನಾಥ್, ಕಾರ್ಯದರ್ಶಿಗಳಾದ ವಿಜಯ್ ಕುಮಾರ್, ಸಮೀವುಲ್ಲಾ, ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷ   ಹಾಗೂ ಕಲಾವಿದ ಮಾರುತೇಶ್ ಕೂನಿಕೆರೆ ಹಾಗೂ ನೃತ್ಯಪಟು ಹಾಗೂ ಹಾಡುಗಾರ ಮಹೇಶ್ ಸೇರಿದಂತೆ ಸಮಿತಿಯ ಸದಸ್ಯರುಗಳು ಹಾಗೂ ವಿಷ್ಣುವರ್ಧನ್ ಅಭಿಮಾನಿ ಬಳಗದವರು ಭಾಗವಹಿಸಿದ್ದರು.    

About The Author

Leave a Reply

Your email address will not be published. Required fields are marked *