March 3, 2026
0001

ನಗರದ ತಾಲ್ಲೂಕು ಕಚೇರಿ ಮುಂಭಾಗದ ರಸ್ತೆಯಿಂದ   ವೇದಾವತಿ ನದಿ ಸೇತುವೆಯ ಮುಂದಿನ ರೆಡ್ಡಿಹೋಟೆಲ್ ನ ವರೆಗೂ  ರಸ್ತೆಯಲ್ಲಿನ ತಗ್ಗು-ಗುಂಡಿಗಳನ್ನು ಮುಚ್ಚುವ   ಮೂಲಕ ಸಾರ್ವಜನಿಕರ ಹಾಗೂ ವಾಹನಗಳ  ಸುಗಮ ಸಂಚಾರ ಕ್ಕೆ ಅನುವು ಮಾಡಿಕೊಡಲು  ಸಾರ್ವಜನಿಕರು ಒತ್ತಾ ಯಿಸಿದ್ದಾರೆ.

ತಾಲ್ಲೂಕು ಕಚೇರಿ ಸಮೀಪವಿರುವ  ವೇದಾವತಿ ನದಿಗೆ ಅಡ್ಡಲಾಗಿ  ನಿರ್ಮಿಸಿರುವ  ಸೇತುವೆ ಮೇಲೆ ಸೇರಿದಂತೆ  ಇತರೆಡೆಗಳಲ್ಲಿ ಸಾಕಷ್ಟು ತಗ್ಗುಗುಂಡಿಗಳಿದ್ದು, ವಹಾನಸವಾರರು ಗುಂಡಿಗಳನ್ನು ತಪ್ಪಿಸಲು  ಹೋಗಿ ಕಾಲು-ಕೈ ಮುರಿದುಕೊಳ್ಳುವುದಕ್ಕೂ ಮುಂಚೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಂಡಿಗಳನ್ನು ಮುಚ್ಚುವಂತೆ ವಿದ್ಯಾರ್ಥಿಗಳು, ನಾಗರೀಕರು, ಸಾರ್ವಜನಿಕರು ಸಂಬಂಧಿಸಿದಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಕಣ್ಣಿಗೆ ಕಂಡರೂ ಕಾಣದ ಹಾಗೆ ಓಡಾಡುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯತನ  ಿದಕ್ಕೆ ಕಾರಣ ಎನ್ನಬಹುದಾಗಿದೆ.  ಸಾರ್ವಜನಿಕ ಹಿತ ಕಾಪಾಡುವ ಅಧಿಕಾರಿ ವರ್ಗದವರು  ಕಣ್ಣು ಮುಚ್ಚಿ  ಕುಳಿತಿರುವುದು  ಸಾರ್ವಜನಿಕರ  ಆಕ್ರೋಶಕ್ಕೆ   ಕಾರಣವಾಗಿದೆ.

ವೇದಾವತಿ ಸೇತುವೆ ಮೇಲೆ ರಾತ್ರಿ  ಸಮಯದಲ್ಲಿ ಕತ್ತಲಾಗಿರುವುದರಿಂದ  ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ನಗರಸಭೆಯ ಪೌರಾಯುಕ್ತರಲ್ಲಿ ಮನವಿ ಮಾಡಿದ್ದಾರೆ. ಶೀಘ್ರವೇ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರ ಸುಗಮ ಸಂಚಾರಕ್ಕೆ  ಅನುವು ಮಾಡಿಕೊಡುವಂತೆ  ಸಂಬಂಧಿಸಿದಅಧಿಕಾರಿಗಳಲ್ಲಿ   ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *